Ranya Rao: ನಟಿ ರನ್ಯಾ ರಾವ್‌ ಕಾರು ಚಾಲಕ ಬಂಧನ!

Share the Article

Ranya Rao: ಹಣ ಡಬ್ಲಿಂಗ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಟಿ ರನ್ಯಾ ರಾವ್‌ ಕಾರು ಚಾಲಕನನ್ನು ಪೊಲೀಸರು ಬಂಧನ ಮಾಡಿರುವ ಕುರಿತು ವರದಿಯಾಗಿದೆ.

ದೀಪಕ್‌ ಬಂಧಿತ ಆರೋಪಿ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯ ನಿವಾಸಿ.

ಈ ಹಿಂದೆ ಈತ ರನ್ಯಾ ರಾವ್‌ ಕಾರು ಚಾಲಕನಾಗಿದ್ದ ಎನ್ನಲಾಗಿದೆ. ಹಣ ಡಬ್ಲಿಂಗ್‌ ಮಾಡುವುದಾಗಿ ಹೇಳಿ ಹಲವರಿಗೆ ವಂಚನೆ ಮಾಡಿದ ಆರೋಪ ಈತನ ಮೇಲಿದೆ. ಈ ಹಿನ್ನೆಲೆಯಲ್ಲಿ ಈತನ ಬಂಧನವಾಗಿದೆ.

ಇನ್ನು ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್‌ ಪ್ರಕರಣಕ್ಕೂ ದೀಪಕ್‌ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿಯಾಗಿದೆ.

Comments are closed.