Subramanya: ನಟ ಪ್ರಭುದೇವ್‌ ಕುಕ್ಕೆ ಸುಬ್ರಹ್ಮಣ್ಯ ಭೇಟಿ!

Share the Article

Subramanya: ಚಲನಚಿತ್ರರಂಗದ ನಟ, ಕೊರಿಯೋಗ್ರಾಫರ್‌ ಪ್ರಭುದೇವ ತಮ್ಮ ಕುಟುಂಬ ಸಮೇತರಾಗಿ ಇಂದು (ಶನಿವಾರ) ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಾಗೂ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರಭುದೇವ್‌ ಅವರು ತಮ್ಮ ಪತ್ನಿ, ಕುಟುಂಬದವರೊಂದಿಗೆ ಮಹಾಭಿಷೇಕ ಪೂಜೆಯನ್ನು ನೆರವೇರಿಸಿ ಪ್ರಸಾದ ಸ್ವೀಕಾರ ಮಾಡಿದರು. ನಂತರ ದೇವಳದ ವತಿಯಿಂದ ಪ್ರಭುದೇವ ದಂಪತಿಯನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಸಹಾಯಕ ಕಾರ್ಯನಿರ್ವಾಕ ಅಧಿಕಾರಿ ಯೇಸುರಾಜ್‌, ಶಿಷ್ಟಾಚಾರ ಅಧಿಕಾರಿ ಜಯರಾಮ್‌ ರಾವ್‌ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.