Andhra Pradesh: ಓದಿನಲ್ಲಿ ಮಕ್ಕಳು ಹಿಂದುಳಿದಿದ್ದಾರೆ ಎಂದು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ!

Andhra Pradesh: ಓದಿನಲ್ಲಿ ಮಕ್ಕಳು ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ತಂದೆಯೋರ್ವ ತನ್ನ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಕಡಿಮೆ ಅಂಕ ಪಡೆದುಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕೆ ಚಿಂತೆಯಲ್ಲಿದ್ದ ತಂದೆ ಈ ರೀತಿ ಮಾಡಿರುವುದಾಗಿ ಡೆತ್‌ನೋಟಲ್ಲಿ ಬರೆದಿದ್ದಾನೆ.

ಕಾಕಿನಾಡ ಜಿಲ್ಲೆಯ ಸರ್ಪವರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕ್ರೂರ ಘಟನೆ ನಡೆದಿದೆ.

ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದ ವನಪಲ್ಲಿ ಚಂದ್ರಕಿಶೋರ್‌ ತನ್ನ ಮಕ್ಕಳ ಬಗ್ಗೆ ಅತಿಯಾದ ಕನಸನ್ನು ಕಂಡಿದ್ದಾನೆ. ಪ್ರತೀ ಬಾರಿ ಪರೀಕ್ಷೆ ಪಡೆಯುತ್ತಿದ್ದಾಗ ಆತ ಅವರ ಅಂಕವನ್ನು ಕಂಡು ಅಸಮಾಧಾನಗೊಂಡಿದ್ದ ಎನ್ನಲಾಗಿದ್ದು, ಈ ಕುರಿತು ಹಲವು ಬಾರಿ ಮನೆಯಲ್ಲಿ ಗಲಾಟೆ ನಡೆದಿದೆ.

ಹೋಳಿ ಹಬ್ಬಕ್ಕೆ ಚಂದ್ರಕಿಶೋರ್‌ ತನ್ನ ಪತ್ನಿ ತನುಜಾ, ಇಬ್ಬರು ಮಕ್ಕಳಾದ ಜೋಶಿಲ್‌, ನಿಖಿಲ್‌ ಜೊತೆ ಕಚೇರಿಗೆ ಹೋಗಿದ್ದಾನೆ. ಪತ್ನಿಯನ್ನು ಕಚೇರಿಯಲ್ಲಿ ಇರಲು ಹೇಳಿ, ಮಕ್ಕಳನ್ನು ಕರೆದುಕೊಂಡು ನೇರ ಮನೆಗೆ ಬಂದಿದ್ದಾನೆ. ನಂತರ ಅವರ ಕೈ ಕಾಲುಗಳನ್ನು ಕಟ್ಟಿ ತಲೆಗಳನ್ನು ನೀರು ತುಂಬಿಕ ಬಕೆಟ್‌ನಲ್ಲಿ ಮುಳುಗಿಸಿ ಕೊಂದಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತ ಪತಿ ಬಹಳ ಸಮಯವಾದರೂ ಬಾರದೇ ಇದ್ದುದರಿಂದ ತನುಜಾ ಸಹೋದ್ಯೋಗಿಗಳ ಜೊತೆ ಮನೆಗೆ ಹೋಗಿದ್ದಾಳೆ. ಕಿಟಕಿಯಲ್ಲಿ ನೋಡಿದಾಗ ಪತಿ, ಇಬ್ಬರು ಮಕ್ಕಳು ಸಾವಿಗೀಡಾಗಿರುವುದು ಕಂಡು ಬಂದಿದೆ.

Comments are closed.