Rudrappa Lamani: ಮೂತ್ರ ವಿಸರ್ಜಿಸುವಾಗ ಬಂದು ಗುದ್ದಿದ ಸ್ಕೂಟರ್ – ರಾಜ್ಯದ ಉಪಸಭಾಪತಿ ರುದ್ರಪ್ಪ ಲಮಾಣಿ ಸ್ಥಿತಿ ಗಂಭೀರ

Rudrappa Lamani: ರಾಜ್ಯದ ವಿಧಾನಸಭೆಯ ಉಪಸಭಾಪತಿಯಾದ ರುದ್ರಪ್ಪ ಲಮಾಣಿ ಅವರಿಗೆ ಸ್ಕೂಟರ್ ಒಂದು ಬಂದು ಡಿಕ್ಕಿ ಹೊಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಬೆಂಗಳೂರಿನಿಂದ ಸ್ವಗ್ರಾಮವಾದ ಚಿತ್ರದುರ್ಗದ ಹಿರಿಯೂರಿಗೆ ತೆರಳುವಾಗ  ತೆರಳುವಾಗ ಮಾರ್ಗಮಧ್ಯ, ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಲಮಾಣಿ ಅವರು ಕೆಳಗೆ ಇಳಿದಿದ್ದಾರ. ಅದೇ ವೇಳೆ ಬಂದಂತಹ ಸ್ಕೂಟರ್ ಅವರಿಗೆ ಡಿಕ್ಕಿ ಹೊಡೆದಿದೆ. ಆಗ ಅವರ ತಲೆ, ಕೈ, ಕಾಲುಗಳಿಗೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಕೂಡಲೇ ಲಮಾಣಿ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.