Uttara Kannada: ಹೆಣ್ಣು ಬೆಕ್ಕಿನ ಹಿಂದೆ ಓಡಿ ಬಂದ ಪಕ್ಕದ ಮನೆಯ ಗಂಡು ಬೆಕ್ಕು – ಮಚ್ಚಿನಿಂದ ಹೊಡೆದಾಡಿಕೊಂಡ ಮನೆ ಮಾಲೀಕರು!!

Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ನಮ್ಮನೆ ಹೆಣ್ಣು ಬೆಕ್ಕಿನ ಹಿಂದೆ ಪಕ್ಕದ ಮನೆಯ ಗಂಡು ಬೆಕ್ಕು ಓಡಿ ಬಂದಿದೆ ಎಂದು ಎರಡು ಮನೆಯ ಮಾಲೀಕರು ಇಬ್ಬರು ಮಚ್ಚಿನಿಂದ ಹಿಡಿದು ಹೊಡೆದಾಡಿಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉತ್ತರ ಕನ್ನಡ(Uttara Kannada) ಜಿಲ್ಲೆಯ ದಾಂಡೇಲಿಯ ದೇಶಪಾಂಡೆ ನಗರ ಬಸ್ ಡಿಪೋ ಬಳಿ ಮೊನ್ನೆ ರಾತ್ರಿ ಈ ಘಟನೆ ನಡೆದಿದೆ. ಬೆಕ್ಕುಗಳ ಜಗಳದ ವಿಷಯಕ್ಕೆ ಅಕ್ಕಪಕ್ಕ ಮನೆದವರಲ್ಲಿ ಜಗಳ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಅಕ್ಕಪಕ್ಕದ ಮನೆಯವರ ನಡುವೆ ಹೊಡೆದಾಟ ನಡೆದಿದೆ. ಹೆಣ್ಣು ಬೆಕ್ಕಿನ ಯಜಮಾನ ಇಫ್ಜಾನ್ ಎಂಬಾತ, ಗಂಡು ಬೆಕ್ಕಿನ ಮನೆಯವರಾದ ಅದ್ನಾನ್ ತಲೆಗೆ ಹಾಗೂ ಸಹೋದರ ಅರ್ಜಾನ್ ಮೂಗಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳೀಯರ ಸಹಕಾರದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಧ್ಯ ಈ ಕುರಿತಾಗಿ ಪ್ರಕರಣ ದಾಖಲಾಗಿದ್ದು ಬೆಕ್ಕಿನ ಜಗಳದ ವಿಷಯಕ್ಕೆ ಅಕ್ಕಪಕ್ಕದ ಮನೆಯವರು ಕೈ ಕೈ ಮೀಲಾಯಿಸುವ ಹಂತಕ್ಕೆ ತಿರುಗಿ, ಪರಸ್ಪರ ಹೊಡೆದಾಡಿಕೊಂಡಿದ್ದನ್ನು ನೋಡಿ ಪೊಲೀಸರಿಗೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೋ ಅಥವಾ ಇಬ್ಬರಿಗೂ ಬುದ್ಧಿ ಹೇಳಬೇಕೋ ಎಂಬ ಪೇಚಿಗೆ ಸಿಲುಕಿದ್ದಾರೆ.
Comments are closed.