Bengaluru : ನಾಯಿಗಳ ಗುಪ್ತಾಂಗ ಕತ್ತರಿಸಿಕೊಂಡು ಸಂಭೋಗ ಮಾಡುತ್ತಿದ್ದ ವಿಕೃತ ಕಾಮಿ !! ಥಳಿಸಿ ಪೊಲೀಸರಿಗೆ ಒಪ್ಪಿಸಿದ ಜನ

Bengaluru : ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳ ಮೇಲೆ ಮನುಷ್ಯರು ಅತ್ಯಾಚಾರ ಮಾಡುವಂತಹ ವಿಚಿತ್ರ ಹಾಗೂ ಅಸಹ್ಯಕರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಇದರ ಬಗ್ಗೆ ಕೇಳಿದರೆ ನಿಜಕ್ಕೂ ನಿಮಗೆ ಅಸಯ್ಯ ಪಡಬೇಕೋ ಅಥವಾ ವ್ಯಥೆ ಪಡಬೇಕೋ ಎಂದು ತಿಳಿಯದು. ಯಾಕೆಂದರೆ ಇಲ್ಲೊಬ್ಬ ವಿಕೃತಕಾಮಿ ನಾಯಿಗಳನ್ನು ಎಳೆದೊಯ್ದು ಅವುಗಳ ಗುಪ್ತಾಂಗವನ್ನು ಕತ್ತರಿಸಿ ಗುದ ಸಂಭೋಗ ಮಾಡುತ್ತಾ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್‌ನ ಬಳಿ ಈ ಘಟನೆ ನಡೆದಿದೆ. ಜಯನಗರದ ಸುತ್ತ ಮುತ್ತ ವಿದ್ಯಾ ಎನ್ನುವ ಮಹಿಳೆ ಬೀದಿ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ಇಂದು ಬೆಳಗ್ಗೆ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಈ ವೇಳೆ ಶ್ವಾನದ ಜೊತೆ ಸಂಭೋಗ ಮಾಡುತ್ತಿದ್ದ ವ್ಯಕ್ತಿ ಇವರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆಗ ಆತನನ್ನು ಕೂಗುತ್ತಿದ್ದಂತೆ ಅಲ್ಲಿ ನಾಯಿಯನ್ನು ಬಿಟ್ಟು ಓಡಿ ಹೋಗಿದ್ದಾನೆ.
ಬಳಿಕ ವಿದ್ಯಾ ಅವರು ಸ್ಥಳೀಯರನ್ನು ಸಹಾಯಕ್ಕೆ ಹೋಗಿ ನಾಯಿಯನ್ನು ಪಶು ಆಸ್ಪತ್ರೆಗೆ ಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಸಂಜೆ ಪುನಃ ಶಾಲಿನಿ ಎನ್ನುವ ಮಹಿಳೆ ಕೆಲವು ಶ್ವಾನಪ್ರಿಯರೊಂದಿಗೆ ಸೇರಿಕೊಂಡು ಇದೇ ಮೈದಾನದ ಬಳಿ ತೆರಳಿದ್ದಾರೆ. ಈ ವೇಳೆ ಬೆಳಗ್ಗೆ ನಾಯಿಯೊಂದಿಗೆ ಸಂಭೋಗ ಮಾಡುತ್ತಿದ್ದ ಅದೇ ವ್ಯಕ್ತಿಯನ್ನ ನೋಡಿದ್ದಾರೆ. ನಂತರ ಸ್ಥಳೀಯರೆಲ್ಲ ಸೇರಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಆತನನ್ನು ವಿಚಾರಣೆ ಮಾಡುತ್ತಿದ್ದಾರೆ.
ಇನ್ನು ಬೀದಿಯಲ್ಲಿ ಹೆಣ್ಣು ನಾಯಿಗಳ ಮೇಲೆ ಈತ ಕ್ರೌರ್ಯ ಮೆರೆದಿದ್ದಲ್ಲದೇ ಗಂಡು ನಾಯಿಗಳನ್ನೂ ಹಿಡಿದು ಸಂಭೋಗ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈತ ಬೀದಿ ನಾಯಿಯ ಬಾಲ, ಕಾಲು ಹಾಗೂ ಮರ್ಮಾಂಗ ಸೇರಿದಂತೆ ವಿವಿಧ ಭಾಗಗಳಲ್ಲಿ ಕೊಯ್ದಿರುವುದು ಕಂಡುಬಂದಿದೆ. ನಾಯಿ ಗಾಯಗಳಿಂದ ಬಳಲುತ್ತಿದ್ದರೂ ಅದನ್ನು ಈತ ಲೆಕ್ಕಿಸದೇ ಸಂಭೋಗ ಮಾಡಿ ಹೋಗುತ್ತಿದ್ದಾನೆ ಎಂದು ಶ್ವಾನ ಪ್ರಿಯರು ಆರೋಪಿಸಿದ್ದಾರೆ.
Comments are closed.