Sameer MD: ಸೌಜನ್ಯ ಪ್ರಕರಣ ವಿಡಿಯೋ ಮಾಡಿದ್ದ ಸಮೀರ್ – ‘ಲಾಯರ್ ಫೀಸ್ ಕಟ್ಟಲು ಹಣ ಬೇಕು ಫೋನ್‌ಪೇ ಮಾಡಿ’ ಪೋಸ್ಟ್ ವೈರಲ್

Sameer MD : ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೊನಿಂದಾಗಿ ಇದೀಗ ಬೃಹತ್ ಮಟ್ಟದಲ್ಲಿ ವೈರಲ್ ಆಗಿದೆ. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ. ಇದರ ನಡುವೆ ಕೆಲ ಕಿಟಿಗೇಡಿಗಳು ಈ ವಿಡಿಯೋವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ.
ಸಮೀರ್ ಎಂಡಿ(Sameer MD) ಅವರು ಸೌಜನ್ಯ ಪ್ರಕರಣದ ಕುರಿತು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ವಿವರಣೆ ನೀಡಿ ವಿಡಿಯೋವನ್ನು ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದು ಕೋಟಿಗಟ್ಟಲೆ ವ್ಯೂವ್ಸ್ ಕಾಣುವುದರೊಂದಿಗೆ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತ್ತು. ಹೀಗೆ ಸಮೀರ್ ಮಾಡಿದ ವಿಡಿಯೊ ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ನಿಮಗೆ ಹೆಚ್ಚೇನೂ ಹೇಳಬೇಕಿಲ್ಲ. ಪೊಲೀಸರೇ ಕಾನೂನುಬಾಹಿರವಾಗಿ ನೋಟಿಸ್ ನೀಡುವ ಮಟ್ಟಕ್ಕೆ ಸಮೀರ್ ವಿಡಿಯೊ ಸದ್ದು ಮಾಡಿದೆ.
ಇನ್ನು ಸಮೀರ್ ಅವರು ದುಡ್ಡು ಪಡೆದು ಈ ವಿಡಿಯೋವನ್ನು ಮಾಡಿದ್ದಾರೆ ಇದರಿಂದ ಸಾಕಷ್ಟು ಹಣಗಳಿಸಿದ್ದಾರೆ ಎಂಬ ಗಂಭೀರ ಆರೋಪ ಕೂಡ ಅವರ ಮೇಲೆ ಕೇಳಿ ಬಂದಿತ್ತು ಇದಕ್ಕೆ ಪ್ರತಿಕ್ರಿಯಿಸಿದ್ದ ಸಮೀರ್ ‘ನಾನೇ ಎಡಿಟರ್‌ಗೆ ಸಂಬಳ ಕೊಡೋಕೆ ಕಷ್ಟ ಪಡ್ತಾ ಇದ್ದೀನಿ ಅಂಥದ್ರಲ್ಲಿ ಮೂವತ್ತು ಲಕ್ಷ ದುಡ್ಡು ತಗೊಂಡಿದಿನಾ’ ಎಂದು ಕಿಡಿಕಾರಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಕಿಡಿಗೇಡಿಗಳು ಧರ್ಮಸ್ಥಳ ಹಾರರ್ ವಿಡಿಯೊ ಮಾಡಿದ್ದ ಸಮೀರ್ ಅವರಿಗೆ ಹಣದ ಸಮಸ್ಯೆಯಾಗಿದೆ, ಲಾಯರ್ ಫೀಸ್ ಕಟ್ಟಲು ಹಾಗೂ ಎಡಿಟರ್‌ಗೆ ಸಂಬಳ ನೀಡಲು ಹಣದ ಅವಶ್ಯಕತೆ ಇದೆ ಸಹಾಯ ಮಾಡಿ ಎಂದು ಕ್ಯೂಆರ್ ಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಿ. ಇಂತಹ ಕಿಡಿಗೇಡಿಗಳ ಕೃತ್ಯಕ್ಕೆ ಒಳಗಾಗಬೇಡಿ.
Comments are closed.