Muzrai Department: ಇನ್ಮುಂದೆ ವೆಬ್‌ಸೈಟ್‌ನಲ್ಲಿ ದೇಗುಲದ ರೂಮ್‌ಗಳ ಮಾಹಿತಿ ಲಭ್ಯ-ಮುಜರಾಯಿ ಇಲಾಖೆ

-ರಾಜ್ಯದ 400 ಸೇರಿ ಹೊರರಾಜ್ಯದ 3,500 ದೇವಾಲಯಗಳ ಮಾಹಿತಿ ಲಭ್ಯ

Share the Article

Muzrai Department: ರಾಜ್ಯ ಹಾಗೂ ಬೇರೆ ರಾಜ್ಯಗಳ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮುಜರಾಯಿ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ದೇಗುಲದ ರೂಮ್‌ಗಳ ಮಾಹಿತಿ ಇನ್ನು ಮುಂದೆ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಹಬ್ಬ ಹರಿದಿನದಂದು ಬಹುತೇಕ ಜನ ದೇವಾಲಯಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ದೇವಸ್ಥಾನಗಳ ಜೊತೆಗೆ ಅಲ್ಲಿನ ರೂಮ್‌ಗಳು ಕೂಡಾ ರಷ್‌ ಇರುವ ಕಾರಣ ಭಕ್ತಾಧಿಗಳಿಗೆ ಕಷ್ಟ ಆಗುತ್ತದೆ. ಅಲ್ಲದೆ ದುಪ್ಪಟ್ಟು ಹಣ ನೀಡಿ ರೂಮ್‌ ಮಾಡಲೇಬೇಕಾದ ಅನಿರ್ವಾಯತೆ ಕೂಡಾ ಉಂಟಾಗುತ್ತದೆ. ಹಾಗಾಗಿ ರಾಜ್ಯ ಸರಕಾರ ಹೊರರಾಜ್ಯದ ದೇಗುಲಕ್ಕೆ ಹೋಗುವ ಭಕ್ತಾಧಿಗಳಿಗೆ ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳನ್ನು ಘೋಷಿಸಿದೆ.

ಭಕ್ತಾಧಿಗಳಿಗೆ ಅನುಕೂಲವಾಗಲು ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡಲು ಧಾರ್ಮಿಕ ಧತ್ತಿ ಇಲಾಖೆ ಮುಂದಾಗಿದೆ. ಇದರ ಪ್ರಕಾರ ರಾಜ್ಯದ 400 ದೇವಾಲಯದ ಹಾಗೂ ಹೊರ ರಾಜ್ಯದ ಛತ್ರಗಳ ಅಂದಾಜು 3,500 ರೂಮ್‌ಗಳ ಬುಕ್ಕಿಂಗ್‌ ಮಾಹಿತಿ ಆನ್‌ಲೈನ್‌ ಮೂಲಕ ಲಭ್ಯವಾಗಲಿದೆ.

ಕರ್ನಾಟಕ ಟೆಂಪಲ್ಸ್‌ ಅಕಾಮಡೇಷನ್‌ ಡಾಟ್‌ ಕಾಮ್‌ (https://karnatakatemplesaccommodation.com/) ವೆಬ್‌ಸೈಟ್‌ನಲ್ಲಿ ದೇವಾಲಯದ ರೂಮ್‌ಗಳನ್ನು ಬುಕ್‌ ಮಾಡಬಹುದು. ರಾಜ್ಯ ಮಾತ್ರವಲ್ಲದೇ, ಹೊರರಾಜ್ಯಗಳಾದ ತಿರುಪತಿ, ಶ್ರೀ ಶೈಲ, ಮಂತ್ರಾಲಯ ಸೇರಿ ರಾಜ್ಯದ ಮುಜರಾಯಿ ಛತ್ರಗಳಿರುವ ಕಡೆ ಬುಕ್‌ ಮಾಡಬಹುದಾಗಿದೆ. ದೇವಾಲಯದ ಆದಾಯದ ಜೊತೆಗೆ ಭಕ್ತಾಧಿಗಳಿಗೆ ಕೂಡಾ ಇದರಿಂದ ಅನುಕೂಲವಾಗಲಿದೆ.

Comments are closed.