Belthangady: ನಿನ್ನೆ ಸುರಿದ ಭಾರೀ ಮಳೆಗೆ ಯುವಕ ಮೇಲೆ ಬಿದ್ದ ಮರ; ಯುವಕರಿಂದ ರಕ್ಷಣೆ!

Belthangady: ಮೂಡಬಿದಿರೆ ರಸ್ತೆಯ ಪದಂಗಡಿ ಎಂಬಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಯುವಕನೋರ್ವ ಮೇಲೆ ಮರವೊಂದು ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ಯುವಕನನ್ನು ಕೂಡಲೇ ಸಮೀಪದ ಯುವಕರಾದ ಹರೀಶ್ ಶಾಂತಿಬೆಟ್ಟು ಗರ್ಡಾಡಿ ಸಮಂತ್ ಕುಮಾರ್ ಜೈನ್, ಕೃಷ್ಣಪ್ಪ ಕನ್ನಡಿಕಟ್ಟೆ ಇವರುಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಯುವಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
Comments are closed.