CM Yogi: ರಾಮ ಮಂದಿರ ಮಾತ್ರವಲ್ಲ, ದೇವಾಲಯಗಳನ್ನು ಧ್ವಂಸ ಮಾಡಿ ಕಟ್ಟಿರುವ ಮಸೀದಿಗಳ ಇಂಚು ಇಂಚು ಭೂಮಿಯನ್ನು ಪಡೆದೆ ತೀರುತ್ತೇವೆ – ಸಿಎಂ ಯೋಗಿ ಪ್ರತಿಜ್ಞೆ

CM Yogi: ದೇಶದಲ್ಲಿ ರಾಮಮಂದಿರ ಮಾತ್ರವಲ್ಲ ದೇವಾಲಯಗಳನ್ನು ದ್ವಂಸ ಮಾಡಿ ನೀವು ಕಟ್ಟಿರುವಂತಹ ಮಸೀದಿಗಳ, ನಮ್ಮ ದೇವಾಲಯಗಳ ಇಂಚು ಇಂಚು ಭೂಮಿಯನ್ನು ನಾವು ಪಡೆದೆ ತೀರುತ್ತೇವೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಜ್ಞೆ ಮಾಡಿದ್ದಾರೆ.

ದೇಶದಲ್ಲಿ ಮಸೀದಿಗಳ ಅಡಿಯಲ್ಲಿ ಮಂದಿರವನ್ನು ಹುಡುಕುವಂತಹ ಚಾಳಿ ಒಂದು ಬೆಳೆದುಕೊಂಡು ಬಿಟ್ಟಿದೆ. ಇದು ಒಳಿತೋ, ಕೆಡುಕೋ ಎಂದು ಸದ್ಯ ವಿಶ್ಲೇಷಿಸುವಂತಹ ಸಮಯವಲ್ಲ. ಆದರೆ ಮುಂದೊಂದು ದಿನ ಇದರ ಪರಿಣಾಮ ತುಂಬಾ ಕೆಟ್ಟದಾಗಿರುವುದಂತೂ ಸತ್ಯ. ಈಗಾಗಲೇ ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿ ಭವ್ಯ ರಾಮ ಮಂದಿರ ಅಯೋಧ್ಯೆಯಲ್ಲಿ ತಲೆಯೆತ್ತಿದೆ. ಈ ಬೆನ್ನಲ್ಲೇ ಕಾಶಿ ಮಥುರದಲ್ಲಿರುವಂತಹ ಮಸೀದಿಗಳ ಅಡಿಯಲ್ಲಿ ದೇವಾಲಯದ ಹುಡುಕಾಟ ನಡೆಯುತ್ತಿದೆ. ಇದರೊಂದಿಗೆ ದೇಶಾದ್ಯಂತ ಇರುವಂತಹ ಅನೇಕ ಮಸೀದಿಗಳ ಅಡಿಯಲ್ಲಿಯೂ ದೇವಾಲಯಗಳ ಕುರುಹನ್ನು ಹಿಡಿದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ ಅವರು ಈ ಒಂದು ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದಾರೆ.

ರಾಜಧಾನಿ ಲಕ್ನೋದಲ್ಲಿ (Lucknow) ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿಯವರು ಸಂಭಾಲ್‌ನಲ್ಲಿ ಹರಿ ಹರ ದೇವಾಲಯವನ್ನು (Hari Hara Temple) ಧ್ವಂಸ ಮಾಡಲಾಗಿದೆ ಎಂಬುದು ಸತ್ಯ ಎಂದು ಹೇಳಿದರು ಮುಂದುವರೆದು ಪುರಾಣಗಳಲ್ಲಿ 5000 ವರ್ಷಗಳ ಹಿಂದೆಯೇ ಸಂಭಾಲ್‌ನ ಬಗ್ಗೆ ಉಲ್ಲೇಖಿಸಲಾಗಿದ್ದು, ವಿಷ್ಣುವಿನ ಹತ್ತನೇ ಅವತಾರವು ಈ ಭೂಮಿಯಲ್ಲಿ ಸಂಭವಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಯಾರೇ ಆಗಲಿ, ಜನರ ನಂಬಿಕೆಯನ್ನು ಬಲವಂತವಾಗಿ ಹತ್ತಿಕ್ಕಿದರೆ ಅದನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಅಲ್ಲದೆ “ನಮ್ಮ (ಹಿಂದೂಗಳ) ಭೂಮಿಯ ಒಂದು ಇಂಚನ್ನೂ ನಾವು ಬಿಟ್ಟುಕೊಡುವುದಿಲ್ಲ. ದೇವಾಲಯಗಳನ್ನು ದ್ವಂಸ ಮಾಡಿ ನೀವು ಕಟ್ಟಿದ ಎಲ್ಲಾ ಮಸೀದಿಗಳ ಇಂಚು ಇಂಚು ಭೂಮಿಯನ್ನು ನಾವು ಪಡೆಯುತ್ತೇವೆ. ನಮ್ಮ ಭೂಮಿಯನ್ನು ಪಡೆದಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ

Comments are closed.