D.K: ಶಿರಾಡಿ ಘಾಟ್ ಬೈಪಾಸ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಿಗೆ ಮನವಿ ಮಾಡಿದ ಕ್ಯಾ.ಬ್ರಿಜೇಶ್ ಚೌಟ

Share the Article

Mangalore: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಸುಧಾರಣೆ ಹಾಗೂ ಪ್ರಮುಖವಾಗಿ ಶಿರಾಡಿ ಘಾಟ್ ಬೈಪಾಸ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮನವಿ ಮಾಡಿದರು.

ಈ ಮಹತ್ವದ ಹೆದ್ದಾರಿ ಯೋಜನೆಯನ್ನು ಮುಂದುವರಿಸಲು ಅರಣ್ಯ ಇಲಾಖೆ ಸಹಿತ ಅಗತ್ಯ ಅನುಮತಿಗಳಿಗೆ ಇರುವ ಆಡಳಿತಾತ್ಮಕ ಅಡೆ-ತಡೆಗಳನ್ನು ನಿವಾರಿಸಲು ಹಾಗೂ ಕೆಲ ಅಧಿಕಾರಶಾಹಿ ಅಡೆ-ತಡೆ ನಿವಾರಣೆಗೆ ರಾಜ್ಯ ಸರ್ಕಾರಕ್ಕೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲು ಕೇಂದ್ರ ಸಚಿವರ ಮಧ್ಯಪ್ರವೇಶವನ್ನು ಸಂಸದರು ಕೋರಿಕೊಂಡರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಿಸ್ತೃತ ಯೋಜನಾ ವರದಿಯ ಪ್ರಗತಿ ಹಾಗೂ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ನಡೆಯುತ್ತಿರುವ ಇತರ ಕಾಮಗಾರಿಗಳ ಬಗ್ಗೆ ಸಚಿವರಿಗೆ ಅವರು ಮಾಹಿತಿ ನೀಡಿದರು.

Comments are closed.