Chandan-Nivedita: 9 ತಿಂಗಳ ಬಳಿಕ ಮತ್ತೆ ಒಂದಾದ ಚಂದನ್- ನಿವೇದಿತಾ !! ಪ್ರೆಸ್ ಮೀಟ್ ಕರೆದು ಹೇಳಿದ್ದೇನು?

Chandan-Nivedita: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ವರ್ಷ ಖುಷಿಯಾಗಿ ಸಂಸಾರ ನಡೆಸಿದ್ದ ಈ ಜೋಡಿ ಬಳಿಕ ವಿಚ್ಛೇದನ ಪಡೆದು ಬೇರೆಯಾಗಿತ್ತು. ವಿಚ್ಛೇದನ ಪಡೆದ ಒಂಬತ್ತು ತಿಂಗಳ ಬಳಿಕ ಈ ಜೋಡಿ ಮಂಗಳವಾರ ಮತ್ತೆ ಜೊತೆಯಾಗಿ ಪ್ರೆಸ್‌ಮೀಟ್ ನಡೆಸಿದೆ. ಅಷ್ಟೇ ಅಲ್ಲದೆ ಚಂದನ್ ಶೆಟ್ಟಿ ಅವರು ನಿವೇದಿತಾ ಅವರಿಗೆ ಕಣ್ಣೀರು ಒರೆಸಿ ಸಮಾಧಾನ ಮಾಡಿದ್ದಾರೆ.

ಹೌದು, ಒಂಬತ್ತು ತಿಂಗಳು ನಂತರ ಮತ್ತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮುಖಾಮುಖಿಯಾಗಿದ್ದಾರೆ. ಒಂದೇ ಸಿನಿಮಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಟಿಸಿದ್ದಾರೆ. ಇಂದು ‘ಮುದ್ದು ರಾಕ್ಷಸಿ’ ಸಿನಿಮಾದ ಕೊನೆ ದಿನ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ನಿವೇದಿತಾ ಗೌಡ ಅಳುತ್ತಿದ್ದು ಚಂದನ್ ಶೆಟ್ಟಿ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ಮುದ್ದು ರಾಕ್ಷಸಿ ಸಿನಿಮಾದ ಕೊನೆಯ ದೃಶ್ಯ ಇದಾಗಿದೆ ಎಂದು ಹೇಳಲಾಗಿದೆ. ಈ ದೃಶ್ಯದಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನೀವಿಬ್ಬರು ಮತ್ತೆ ಒಂದಾಗಿ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೂ, ವಿಚ್ಚೇದನಕ್ಕೂ ಮೊದಲೇ ಈ ಸಿನಿಮಾ ಸೆಟ್ಟೇರಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಆಗೋಕು ಮೊದಲೇ ವಿಚ್ಚೇದನ ಆಗಿತ್ತು. ಈ ಮೊದಲು ಸಿನಿಮಾಗೆ ಕ್ಯಾಂಡಿ ಕ್ರಶ್ ಅಂತಾ ಟೈಟಲ್ ಇಡಲಾಗಿತ್ತು. ಆದ್ರೆ ಈಗ ಇದೀಗ ಮುದ್ದು ರಾಕ್ಷಸಿ ಅಂತಾ ಟೈಟಲ್ ಚೇಂಚ್ ಮಾಡಿದ್ದಾರೆ.
Comments are closed.