Director Srivasta: “ರನ್ಯಾ” ಹೆಸರು ಇಟ್ಟಿದ್ದೇ ನಟ ಸುದೀಪ್- ರವಿ ಶ್ರೀವತ್ಸ!

Director Srivasta: ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರನ್ಯಾ ರಾವ್ ಕುರಿತು ನಿರ್ದೇಶಕ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದಾರೆ. ಮಾಣಿಕ್ಯ ಸಿನಿಮಾದ ಶೂಟಿಂಗ್ ಸಮಯದಲ್ಲಿ ರನ್ಯಾ ಎನ್ನುವ ಹೆಸರನ್ನು ಸುದೀಪ್ ಅವರೇ ಇಟ್ಟಿದ್ದರು. ಆ ಹೆಸರು ಕ್ಯಾಚಿ ಆಗಿತ್ತು ಎಂದು ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ.
ಮಾಣಿಕ್ಯ, ಪಟಾಕಿ ಸಿನಿಮಾ ನಂತರ ಆಕೆ ಎಲ್ಲೂ ಕಾಣಿಸಲೇ ಇಲ್ಲ. ಮಾಣಿಕ್ಯ ಸಿನಿಮಾದಲ್ಲಿ ರಮ್ಯಾ ಅವರು ನಟಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಅದೇ ಸಮಯದಲ್ಲಿ ಈಕೆ ಆಯ್ಕೆಯಾದರು. ಆಗ ಸುದೀಪ್ ಅವರೇ ಹರ್ಷವರ್ಧಿನಿ ಎನ್ನುವ ಹೆಸರನ್ನು ರನ್ಯಾ ಎಂದು ಬದಲಾವಣೆ ಮಾಡಿದರು. ಈ ಹೆಸರನ್ನು ಆಕೆ ತನ್ನ ಪಾಸ್‌ಪೋರ್ಟ್‌ನಲ್ಲೂ ಹಾಕಿದ್ದಾರೆ ಎಂದು ಹೇಳಿದರು.
ನಟನೆಯಲ್ಲಿ ಅಷ್ಟೊಂದು ಪರಿಣಿತರಾಗಿರದ ಕಾರಣ ತಿದ್ದಲು ಸುದೀಪ್ ಅವರು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಇಂದು ಈ ರೀತಿಯ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಶ್ರೀವತ್ಸ ಹೇಳಿದ್ದಾರೆ.
Comments are closed.