Shivamogga: ಹಾಲು ಕುಡಿಯದೆ ಮೂರು ದಿನದ ಗಂಡಾನೆ ಮರಿ ಸಾವು!

Shivamogga: ಮೂರು ದಿನದ ಗಂಡು ಆನೆ ಮರಿಯೊಂದು ತಾಯಿ ಹಾಲು ಕುಡಿಯದ ಕಾರಣ ಸಾವನ್ನಪ್ಪಿರುವ ಘಟನೆ ಸಕ್ರೆಬೈಲು ಆನೆ ಬಿಡಾರ ಸಮೀಪ ಸೋಮವಾರ ಸಂಜೆ ನಡೆದಿರುವ ಕುರಿತು ವರದಿಯಾಗಿದೆ.

10 ವರ್ಷ ವಯಸ್ಸಿನ ಹೇಮಾವತಿ ಆನೆಯು ಶುಕ್ರವಾರ ಕಾಡಿನಲ್ಲಿ ಮರಿಗೆ ಜನ್ಮ ನೀಡಿತ್ತು. ಹೇಮಾವತಿ ಜೊತೆಗೆ ಶಿಬಿರದ ನೇತ್ರಾವತಿ ಹಾಗೂ ಒಂದು ಕಾಡಾನೆ ರಕ್ಷಣೆ ನೀಡುತ್ತಿತ್ತು. ಮರಿಯು ಹಾಲು ಕುಡಿಯುತ್ತಿರಲಿಲ್ಲ. ತಾಯಿ ಕೂಡಾ ಮರಿಯ ಆರೈಕೆ ಮಾಡುತ್ತಿರದ ಕಾರಣ ಹೀಗಾಗಿ ಮಾವುತರು ಹೋಗಿ ಬಾಟಲ್‌ನಲ್ಲಿ ಹಾಲು ಕುಡಿಸುವ ಪ್ರಯತ್ನ ಮಾಡಿದ್ದರೂ ಕೂಡಾ ಫಲ ಕೊಟ್ಟಿರಲಿಲ್ಲ. ಅಲ್ಲದೆ ಕಾಡಾನೆಯು ಹೇಮಾವತಿ ಆನೆಯನ್ನು ಒಂದೂವರೆ ಕಿ.ಮೀ.ನಷ್ಟು ಗುಡ್ಡ ಹತ್ತಿ ನಡೆಸಿದೆ. ಹೀಗಾಗಿ ಆನೆ ಮೃತಪಟ್ಟಿದೆ.
Comments are closed.