Raju Murugan: ಅಪಾರ್ಟ್ಮೆಂಟ್‌ನಲ್ಲಿ ವೇಶ್ಯಾವಾಟಿಕೆ- ನಿರ್ದೇಶಕನ ಪತ್ನಿಗೆ ಬೆದರಿಕೆ!

Share the Article

Raju murugan: ಚೆನ್ನೈನ ಐಯ್ಯಪ್ಪಂತಂಗಲ್‌ನಲ್ಲಿರುವ ಐಷರಾಮಿ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದವರಿಗೆ ಮತ್ತು ಅವರ ಕುಟುಂಬಕ್ಕೆ ನಿರಂತರ ಕಿರುಕುಳವನ್ನು ನೀಡಲಾಗುತ್ತಿರುವ ಕುರಿತು ವರದಿಯಾಗಿದೆ. ಖ್ಯಾತ ನಿರ್ದೇಶಕ ರಾಜು ಮುರುಗನ್‌ ಅವರ ಪತ್ನಿ ಹೇಮಾ ಸಿನ್ಹಾ ಅವರು ಈ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಹೇಮಾ ಸಿನ್ಹಾ ಅವರು ಅಪಾರ್ಟ್‌ಮೆಂಟ್‌ನ ಸಂಘಕ್ಕೆ ಈ ಕುರಿತು ದೂರನ್ನು ನೀಡಲಾಗಿದ್ದರೂ ಈ ಕುರಿತು ಯಾವುದೇ ಗಮನ ಕೊಡುತ್ತಿಲ್ಲ ಎನ್ನಲಾಗಿದೆ. ಪ್ರತೀ ಮೂರು ತಿಂಗಳಿಗೊಮ್ಮೆ ರೂ.22000 ನಿರ್ವಹಣಾ ಶುಲ್ಕವನ್ನು ಪಾವತಿ ಮಾಡುತ್ತಿದ್ದರೂ, ಕಸ ವಿಲೇವಾರಿ, ಈಜುಕೊಳದ ಬಳಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಹ ನಿರಾಕರಿಸಲಾಗಿದೆ.

ಮಹಿಳೆಯರ ಮೇಲಿನನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ನಾಲ್ಕು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.