Seeta Mandir: ಅಯೋಧ್ಯೆಯ ರಾಮಮಂದಿರದಂತೆ ತಲೆ ಎತ್ತಲಿದೆ ಭವ್ಯ ‘ಸೀತಾ ಮಂದಿರ’ – ಅಮಿತ್ ಶಾ ಘೋಷಣೆ

Seeta Mandir: ಅಯೋಧ್ಯೆಯಲ್ಲಿ ನೂರಾರು ಕೋಟಿ ಹಿಂದೂ ಭಕ್ತರ ಕನಸಿನಂತೆ ಭವ್ಯವಾದ ರಾಮ ಮಂದಿರ ತಲೆಯೆತ್ತಿ ನಿಂತಿದೆ. ಮಂದಿರ ನಿರ್ಮಾಣ ಆಗಿ ಒಂದು ವರ್ಷ ಕೂಡ ಸಂಪೂರ್ಣವಾಗಿದೆ. ಈ ಬೆನ್ನಲ್ಲೇ ರಾಮಮಂದಿರ ಮಾದರಿಯಂತೆ ಸೀತಾ ಮಂದಿರ(Seeta Mandir) ಕೂಡ ತಲೆ ಎತ್ತಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಣೆ ಮಾಡಿದ್ದಾರೆ.

ಶಾಶ್ವತ ಮಿಥಿಲಾ ಮಹೋತ್ಸವ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಹಾರಕ್ಕೆ ತೆರಳಿದಾಗ ಸೀತಾಮಾತೆಯ ಮಂದಿರ ನಿರ್ಮಾಣದ ಭರವಸೆ ನೀಡಿದ್ದೆ. ಅದನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ. ಅಯೋಧ್ಯೆಯ ರಾಮಮಂದಿರ ಮಾದರಿಯಲ್ಲಿಯೇ ಬಿಹಾರದಲ್ಲಿ ಸೀತಾಮಾತೆಯ ಮಂದಿರ ನಿರ್ಮಾಣ ಮಾಡಲಾಗುವುದು. ಈ ಮಂದಿರವು ದೇಶದ ನಾರಿ ಶಕ್ತಿಯ ಪ್ರತೀಕವಾಗಿ ವಿಶ್ವದ ಗಮನ ಸೆಳೆಯಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
Comments are closed.