Actor Vijay: ಇಫ್ತಾರ್ ಕೂಟದಲ್ಲಿ ಮುಸ್ಲಿಂಮರಿಗೆ ಅವಮಾನ ಆರೋಪ-ನಟ ವಿಜಯ್ ವಿರುದ್ಧ ದೂರು!


Actor Vijay: ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ನಟ ವಿಜಯ್ ಅವರು ಇತ್ತೀಚೆಗಷ್ಟೇ ರಾಯಪೆಟ್ಟಾ ವೈಎಂಸಿಎ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ಮುಸ್ಲಿಂ ಬಾಂಧವರ ಜೊತೆ ಕಾಣಿಸಿಕೊಂಡಿದ್ದರು. ಅವರ ಜೊತೆ ನಮಾಜ್ ಕೂಡಾ ಮಾಡಿದ್ದು, ಇದರ ಫೊಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆಗಿದೆ. ಇದರಿಂದ ಕೆಲವೊಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರನ್ನು ನೀಡಿರುವ ಕುರಿತು ವರದಿಯಾಗಿದೆ. ಮುಸ್ಲಿಮರನ್ನು ವಿಜಯ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸುನ್ನತ್ ಜಮಾತ್ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲು ಮಾಡಲಾಗಿದೆ.
ಉಪವಸ ಅಥವಾ ಇಫ್ತಾರ್‌ಗೆ ಸಂಬಂಧವಿಲ್ಲದ ಕುಡುಕುರು ರೌಡಿಗಳು ಭಾಗವಹಿಸಿದ್ದಾರೆ. ಇದು ಮುಸ್ಲಿಮರನು ಅವಮಾನ ಮಾಡಿದಂತಾಗಿದೆ. ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ವಿಜಯ್ ಅವರ ವಿದೇಶೀ ಗಾರ್ಡ್ಸ್ ಜನರನ್ನು ಅಗೌರವಿಸಿದರು. ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ವಿಜಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಾವು ಪ್ರಚಾರಕ್ಕಾಗಿ ದೂರನ್ನು ದಾಖಲಿಸಿಲ್ಲ ಎಂದು ತಮಿಳುನಾಡು ಸುನ್ನತ್ ಜಮಾತ್ ಕೋಶಾಧಿಕಾರಿ ಸೈಯದ್ ಕೌಸ್ ಹೇಳಿದ್ದಾರೆ ಎಂದು ವರದಿಯಾಗಿದೆ.

Comments are closed.