Mangaluru airport: ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ!

Share the Article

Mangaluru airport: ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಂದ ಮೆಚ್ಚುಗೆಯನ್ನು ಗಳಿಸಿದೆ. ಇದು ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ ಎಂಬ ಜನಪ್ರಿಯತೆಯನ್ನೂ ಗಳಿಸಿದೆ. ಇದಕ್ಕೆ ಸಾಂಕೇತಿಕವಾಗಿ ಈಗ ಏರ್‌ಪೋರ್ಟ್ (Mangaluru airport) ಸರ್ವಿಸ್ ಕ್ವಾಲಿಟಿ’- ಎಎಸ್‌ಕ್ಯೂ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಮತ್ತು ಸುಗಮವಾದ ಪ್ರಯಾಣದ ಅನುಭವವನ್ನು ನೀಡುವ ಸಮರ್ಪಕ ವ್ಯವಸ್ಥೆಗೆ ನೀಡಲ್ಪಡುವ ಪ್ರಶಸ್ತಿ ಇದಾಗಿದ್ದು ವಿಮಾನಯಾನ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ.

2025ರ ಸೆಪ್ಟೆಂಬರ್ 8 ರಿಂದ 11 ರ ತನಕ ಚೀನಾದ ಗುವಾಂಗ್‌ಝೌನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಎಎಸ್‌ಕ್ಯೂ ಪ್ರಶಸ್ತಿ ಪ್ರದಾನ ನೆರವೇರಲಿದೆ. ಕರಾವಳಿಗರಿಗೂ ಇದೊಂದು ರೀತಿಯ ಹೆಮ್ಮೆಯ ವಿಚಾರವಾಗಿದೆ‌.

Comments are closed.