Student Missing: ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್ಯಾರ್ಥಿನಿ ನಾಪತ್ತೆ!

Student Missing: ಅಮೆರಿಕ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊಣಂಕಿ (20) ಡೊಮಿನಿಕನ್ ರಿಪಬ್ಲಿಕ್ನಲ್ಲಿ ನಾಪತ್ತೆಯಾಗಿದ್ದಾಳೆ. ಕಾಲೇಜಿಗೆ ರಜೆ ಇದ್ದ ಕಾರಣ ಐವರು ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ದಿಢೀರ್ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಪುಂಟಾ ಕಾನಾದ ರಿಯು ರಿಪಬ್ಲಿಕಾ ಹೋಟೆಲ್ ಸಮೀಪದ ಕಡಲತೀರದಲ್ಲಿ ಪಾರ್ಟಿ ಮಾಡಿದ್ದ ಸುದೀಕ್ಷಾ ಗುರುವಾರ ನಸುಕಿನ 4.15ರ ವೇಳೆ ಕಡೆಯದಾಗಿ ಕಾಣಿಸಿದ್ದರು ಎಂದು ವರದಿಯಾಗಿದೆ.

ಮರುದಿನ ಬೆಳಿಗ್ಗೆ ಸುದೀಕ್ಷಾಗಾಗಿ ಸ್ನೇಹಿತರು ಹುಡುಕಾಡಿದ್ದಾರೆ. ಆಕೆ ಹೋಟೆಲ್ ಕೋಣೆಗೆ ಹಿಂದಿರುಗಲಿಲ್ಲ. ಆ ಬಳಿಕ ಪೊಲೀಸ್ಗೆ ದೂರು ನೀಡಿದ್ದಾರೆ. ಹೋಟೆಲ್ನ ಸಿಸಿಟಿವಿ ಆಧರಿಸಿ ಡೊಮಿನಿಕನ್ ರಿಪಬ್ಲಿಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಿಟ್ಸ್ ಬರ್ಗ್ ವಿವಿಯಲ್ಲಿ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ನಡೆಸಿದ್ದ ಸುದೀಕ್ಷಾ, ವರ್ಜೀನಿಯದ ಲೌಡೌನ್ ಕೌಂಟಿಯಲ್ಲಿ ವಾಸವಿದ್ದರು. ಮಗಳು ಹಿಟ್ಸ್ಬರ್ಗ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಳು. ರಜೆಗಾಗಿ ಪಂಟಾ ಕಾನಾಗೆ ಹೋಗಿದ್ದಳು. ಅಲ್ಲಿ ಕಾಣೆಯಾಗಿದ್ದಾಳೆ ಎಂದು ಸುದೀಕ್ಷಾ ತಂದೆ ಸುಬ್ಬರಾಯುಡು ಕೊಣಂಕಿ ಹೇಳಿದ್ದಾರೆ.
Comments are closed.