Tejasvi Surya: ಹೂಗುಚ್ಛ ನ್ಯಾಷನಲ್‌ ವೇಸ್ಟ್‌ ಹೇಳಿದ ತೇಜಸ್ವಿ ಸೂರ್ಯ; ಹೇಳಿಕೆ ಹಿಂಪಡೆಯಲು ಟಿ.ಎಂ.ಅರವಿಂದ್‌ ಮನವಿ!

Share the Article

Bangalore: ಹೂಗುಚ್ಛಗಳು ನ್ಯಾಷನಲ್‌ ವೇಸ್ಟ್‌ ಎನ್ನುವ ಹೇಳಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ. ಎಂ. ಅರವಿಂದ್‌ ಮನವಿ ಮಾಡಿದ್ದಾರೆ.

ತಮ್ಮ ಮದುವೆಯ ಆರತಕ್ಷತೆಗೆ ಸಾರ್ವಜನಿಕರನ್ನು ಆಹ್ವಾನಿಸಿದ ಸಂದರ್ಭದಲ್ಲಿ ಫೇಸ್‌ಬುಕ್‌ ಲೈವ ಬಂದು ಮಾತನಾಡಿ, ಹೂಗುಚ್ಛಗಳು ನ್ಯಾಷನಲ್‌ ವೇಸ್ಟ್‌ ಇವುಗಳನ್ನು ತರಬೇಡಿ ಎಂದು ಮನವಿ ಮಾಡಿದ್ದರು.

ಓರ್ವ ಸಂಸದರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಮಾತುಗಳನ್ನು ಆಡುವುದು ಸರಿಯಲ್ಲ. ಕರ್ನಾಟಕ ರಾಜ್ಯದಲ್ಲಿ ಪುಷ್ಪ ಬೆಳೆಗಳನ್ನು ಸುಮಾರು 38,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹಾಗೂ ವಾಣಿಜ್ಯ ಬೆಳೆಗಳನ್ನು ಸುಮಾರು 1500 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕೃತಕ ಹೂವುಗಳ ಬಳಕೆಯನ್ನು ಬಿಟ್ಟು ನೈಸರ್ಗಿಕ ಹೂವುಗಳ ಬಳಕೆಯನ್ನು ಹೆಚ್ಚಿಸಬೇಕು ಎನ್ನುವ ಆಗ್ರಹವನ್ನು ನಾವು ಮಾಡುತ್ತಲೇ ಬಂದಿದ್ದೇವೆ ಎಂದು ಅವರು ಹೇಳಿದರು.

ಹೂವು ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಬಹಳ ಮಹತ್ವದ ಸ್ಥಾನ ಪಡೆದಿದೆ. ದೇವರ ಪೂಜೆಗೆ ಹೂವುಗಳನ್ನು ಅರ್ಪಿಸುವುದು ಹಾಗೂ ಶುಭ ಸಮಯದಲ್ಲಿ ನೈಸರ್ಗಿಕ ಹೂವುಗಳನ್ನು ನೀಡುವುದು ಶ್ರೇಷ್ಠ ನಂಬಿಕೆ. ಉಡುಗೊರೆಯಾಗಿ ಬೇಡ ಹೇಳುವುದು ಸರಿ. ಆದರೆ ನ್ಯಾಷನಲ್‌ ವೇಸ್ಟ್‌ ಎನ್ನುವ ಪದಪ್ರಯೋಗದಿಂದ ಲಕ್ಷಾಂತರ ರೈತರ ಶ್ರಮದ ಫಲಕ್ಕೆ ಧಕ್ಕೆ ತರುವ ಹೇಳಿಕೆ ಎಂದು ಹೇಳಿದ್ದಾರೆ.

Comments are closed.