Dog Missing: ಬೀದಿ ನಾಯಿ ಕಳವು; ದೂರು ನೀಡಿದ ಮಹಿಳೆ!

Dog Missing: ಮಹಿಳೆಯೊಬ್ಬರು ನಮ್ಮ ಮನೆ ಮುಂದಿನ ಬೀದಿಯಲ್ಲಿ ಇರುತ್ತಿದ್ದ ಹಾಗೂ ರಾತ್ರಿ ವೇಳೆ ನಮ್ಮ ಬೀದಿಯನ್ನು ಕಾವಲು ಕಾಯುತ್ತಿದ್ದ ನಾಯಿ ಕಾಣೆಯಾಗಿದೆ. ದಯವಿಟ್ಟು ನಮ್ಮ ನಾಯಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಾಣಿ ಪ್ರಿಯೆ ನಿರ್ಮಲಾ ಎನ್ನುವವರಿಂದ ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪರಿಚಿತರ ವಿರುದ್ಧ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೂಡ ಎಫ್ ಐಆರ್ ದಾಖಲು ಮಾಡಿಕೊಂಡಿದ್ದಾರೆ. ಮೈಕೋ ಲೇಔಟ್‌ನ ರಂಕ ಕಾಲೋನಿ ರಸ್ತೆಯಲ್ಲಿ ರಾತ್ರಿ 2 ಗಂಟೆಗೆ ಅಪರಿಚಿತ ವ್ಯಕ್ತಿಗಳಿಂದ ಬೀದಿ ನಾಯಿ ಕಳ್ಳತನ ಆಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಸುಮಾರು 3-4 ಅಪರಿಚಿತ ವ್ಯಕ್ತಿಗಳು ಬಂದು ರಂಗ ಕಾಲೋನಿ ಅಪಾರ್ಟೆಂಟ್‌ನ ಬೀದಿಯಲ್ಲಿ ಮಲಗಿದ್ದ ನಾಯಿಯನ್ನು ಚೀಲದಲ್ಲಿ ಕಟ್ಟಿ ಎತ್ತಿಕೊಂಡು ಹೋಗಿದ್ದಾರೆ. ಮೂರ್ನಾಲ್ಕು ಜನರು ಸೇರಿಕೊಂಡು ಚೀಲದಲ್ಲಿ ಏನೋ ಒಯ್ಯುತ್ತಿರುವುದನ್ನು ನಾವು ನೋಡಿದ್ದೇನೆ. ಬಳಿಕ ಶ್ವಾನವು ಕಾಣೆಯಾಗಿದೆಯೆಂದು ಸ್ನೇಹಿತರು ಹೇಳಿದ್ದಾರೆ. ರಂಗ ಕಾಲೋನಿಲ್ಲಿ ಗೋಗೋ ಶ್ವಾನ ಎಂದೇ ಖ್ಯಾತಿಯಾಗಿದ್ದ ಈ ಬೀದಿ ನಾಯಿ ಕಾಣೆಯಾದ ಸಮಯದ ಸಿಸಿಟಿವಿ ಫೂಟೆಜ್ ಕೇಳಿದರೆ ಅಲ್ಲಿನ ಕೆಲವು ನಿವಾಸಿಗಳು ಡಿಲಿಟ್ ಆಗಿದೆ ಅಂತಿದ್ದಾರೆ.
ಆದರೆ, ಮಧ್ಯರಾತ್ರಿ 2 ಗಂಟೆ ಸುಮಾರಿನ ಸಿಸಿಟಿವಿ ಫೂಟೇಜ್ ಮಾತ್ರ ಏಕೆ ಡಿಲೀಟ್ ಮಾಡಿದ್ದೀರಿ. ಸರಿಯಾಗಿ ನಾಯಿ ಕಳೆದುಹೋದ ಸಮಯದ ಸಿಸಿಟಿವಿ ಫೂಟೇಜ್ ಡಿಲೀಟ್ ಆಗಿದ್ದರಿಂದ ರಂಗ ಕಾಲೋನಿಯ ನಿವಾಸಿಗಳ ಮೇಲೆಯೇ ಅನುಮಾನ ಬರುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
Comments are closed.