Microfinance: ವಿಧಾನಸೌಧದಲ್ಲಿ ‘ಮೈಕ್ರೋ ಫೈನಾನ್ಸ್’ ವಿಧೇಯಕ ಅಂಗೀಕಾರ – ಇನ್ಮುಂದೆ ಏನು ಹೇಳುತ್ತೇ ಹೊಸ ನಿಯಮ?

Share the Article

Microfinance: ಮೈಕ್ರೋಫೈನಾನ್ಸ್ ಕಂಪನಿಗಳ (Microfinance) ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇವರ ಹಾವಳಿ ಅನೇಕ ಮುಗ್ಧ ಮನಸ್ಸುಗಳ ಪ್ರಾಣವನ್ನು ತೆಗೆದಿದೆ. ಎಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರವು ಮೈಕ್ರೋ ಫೈನಾನ್ಸ್ ಗಳಿಗೆ ಖಡಕ್ ಎಚ್ಚರಿಕೆ ನೀಡಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಆದರೂ ಕೂಡ ಈ ಮೈಕ್ರೋ ಫೈನಾನಾನ್ಸ್ ಹಾವಳಿ ಇನ್ನೂ ತಪ್ಪಿಲ್ಲ. ಇದೀಗ ಸರ್ಕಾರವು ಈ ಮೈಕ್ರೋ ಫೈನಾನ್ಸ್ ಗಳಿಗೆ ಸರಿಯಾಗಿ ಪಾಠ ಕಲಿಸಲು ವಿಧಾನಸೌಧದಲ್ಲಿ ಹೊಸ ವಿಧೇಯಕವನ್ನು ಮಂಡಿಸಿದೆ.

ಹೌದು, ಕರ್ನಾಟಕ ಕಿರು ಸಾಲ(ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ, ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ ತಪ್ಪಿಸುವ ಮಹತ್ವದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕವನ್ನು ಸಚಿವ ಪ್ರಿಯಾಂಕ ಖರ್ಗೆ ಅವರು ಮಂಡಿಸಿದ್ದು ಅನ್ನೋ ಸಭಾಧ್ಯಕ್ಷ ಯುಟಿ ಖಾದರ್ ಅವರು ಅವರು ಅಂಗೀಕರಿಸಿದರು.

ಅಂದಹಾಗೆ ಗುರುವಾರ ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಮತ್ತು ಕಿರುಕುಳಕ್ಕೆ ಕರಿವಾಣ ಹಾಕುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ- 2025 ಮಂಡಿಸಲಾಗಿತ್ತು. ಸದ್ಯ ಈ ವಿಧೇಯಕ ಇದೀಗ ಅಂಗೀಕಾರಗೊಂಡಿದೆ.

ಏನಿದೆ ವಿಧೇಯಕದಲ್ಲಿ?
ಈ ವಿಧೇಯಕದಡಿ ಅನಧಿಕೃತ ಹಾಗೂ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಅಥವಾ ಲೇವಾದೇವಿದಾರರು ಸಾಲಗಾರನಿಂದ ಬಲವಂತದ ವಸೂಲಿಗೆ ಪ್ರಯತ್ನಿಸೋದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಸಾಲ ಪಡೆದಿರುವ ಸಮಾಜದ ದುರ್ಬಲ ವರ್ಗದವರ ಬಲಿ ಬಲವಂತ ಮಾಡಿ ಸಾಲಗಾರ ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾ ಆಗಿದೆ ಎಂದು ಭಾವಿಸಬೇಕು ಎಂಬ ಮಹತ್ವದ ಅಂಶವನ್ನು ವಿಧೇಯಕ ಒಳಗೊಂಡಿದೆ.

ಜೊತೆಗೆ ಇಂಥಹ ಸಂಸ್ಥೆ ಅಥವಾ ಲೇವಾದೇವಿದಾರ ಸಾಲ, ಬಡ್ಡಿ ವಸೂಲಿಗೆ ಹೂಡುವ ಯಾವುದೇ ದಾವೆ ಅಥವಾ ವ್ಯವಹಾರವನ್ನು ನ್ಯಾಯಾಲಯಗಳು ಪುರಸ್ಕರಿಸಬಾರದು. ಸಾಲಗಾರ ಅಥವಾ ಆತನೊಂದಿಗೆ ಯಾರ ವಿರುದ್ಧವಾದರೂ ಜಂಟಿಯಾಗಿ ದಾವೆ ಹೂಡಿದ್ದರೇ ತಕ್ಷಣದಿಂದ ರದ್ದಾಗಬೇಕು. ಇನ್ನೂ ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರುಸಾಲಕ್ಕೆ ಅಡಮಾನ ಇಟ್ಟುಕೊಂಡಿದ್ದರೇ ಅಂತಹ ಆಸ್ತಿ, ವಸ್ತುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದಾಗಿ ಸ್ಪಷ್ಟ ಪಡಿಸಿದೆ.

Comments are closed.