Kumbha mela: ಕುಂಭಮೇಳದ ಹೆಸರಿನಲ್ಲಿ ನೂರಾರು ಮಂದಿಗೆ ಮೋಸ: ಆರೋಪಿ ಸೆರೆ!

Share the Article

Kumbha mela: ಮಹಾಕುಂಭಮೇಳಕ್ಕೆ (Kumbha mela) ಕರೆದೊಯ್ಯುವ ಭರವಸೆ ನೀಡಿ ಹಣ ಸುಲಿಗೆ ಮಾಡಿದ ವ್ಯಕ್ತಿಯನ್ನು, ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.

ಮಹಾಕುಂಭಮೇಳಕ್ಕೆ ಕರೆದೊಯ್ಯಲಾಗುತ್ತೆ ಎಂದು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿ, ಯಾತ್ರಾರ್ಥಿಗಳನ್ನು ಆಕರ್ಷಿಸಿ ರಾಘವೇಂದ್ರ ವಂಚನೆ ಮಾಡಿದ್ದಾನೆ. ಪಾಂಚಜನ್ಯ ಟೂರ್ಸ್ ಆಯಂಡ್ ಟ್ರಾವೆಲ್ಸಿಂದ ಅಯೋಧ್ಯೆ, ಕಾಶಿ, ಪ್ರಯಾಗ್ರಾಜ್, ವಾರಣಾಸಿ ಸೇರಿಂದತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಫೇಸ್ ಬುಕ್ ನಲ್ಲಿ ಜಾಹೀರಾತು ನೀಡಿದ್ದಾನೆ. ಹಣಪಡೆದ ನಂತರ ಎಲ್ಲರಿಗೂ ಮೋಸ ಮಾಡಿದ್ದಾನೆ.

ಪ್ರವಾಸದ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ 70 ಲಕ್ಷ ರೂ. ಪಡೆದಿರುವ ಆರೋಪದಲ್ಲಿ ಇದೀಗ ಗೋವಿಂದರಾಜನಗರ ಠಾಣೆ ಪೊಲೀಸರು ಕೇಸ್‌ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Comments are closed.