D K Shivakumar : ಡಿಕೆಶಿ ಒಡೆತನದ ಶಾಲೆಯಲ್ಲಿ ಎಷ್ಟು ಫೀಸ್?

Share the Article

D K Shivakumar : ರಾಜಕಾರಣಿಗಳಲ್ಲಿ ಅನೇಕರು ತಮ್ಮದೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರೆಲ್ಲರೂ ರಾಜಕೀಯದ ಮುಖಾಂತರ ಜನರ ಸೇವೆ ಮಾಡುವುದು ಸಾಲದೆಂದು ಶಿಕ್ಷಣ ಸೇವೆಯು ಬೇಕೆಂದು ದೊಡ್ಡ ದೊಡ್ಡ ಸಂಸ್ಥೆಗಳನ್ನು ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲವರು ದೊಡ್ಡ ಮಟ್ಟದ ಫೀಸ್ ಅನ್ನು ಪೀಕುತ್ತಾರೆ. ಅದೇನೇ ಇರಲಿ, ನಮ್ಮ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivakumar )ಅವರು ಕೂಡ ಅನೇಕ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಾರೆ. ಹಾಗಾದರೆ ಡಿಕೆಶಿ ಒಡೆತನದ ಶಾಲೆಯಲ್ಲಿ ಫೀಸ್ ಎಷ್ಟು ಗೊತ್ತಾ? ಅವರೇ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ ನೋಡಿ.

ಹೌದು, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಅವರ ಖಾಸಗಿ ಸ್ಕೂಲ್‌ ಫೀಸ್‌ನ ಬಗ್ಗೆ ಮಾತನಾಡಿದ್ದು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಡಿಕೆಶಿ ವಡೆತನದ ಶಾಲೆಗಳನ್ನು ಅವರ ಮಗಳು ಐಶ್ವರ್ಯ ಅವರು ನೋಡಿಕೊಳ್ಳುತ್ತಿದ್ದಾರೆ. ಅವರು ಪೋಸ್ಟ್ ಮಾಡುವಂತಹ ಕೆಲವು ವಿಡಿಯೋಗಳು ಅವರ ಶಾಲೆ ಎಷ್ಟು ರಿಚ್ ಇದೆ ಎಂಬುದನ್ನು ತೋರಿಸುತ್ತದೆ. ಡಿಕೆ ಶಿವಕುಮಾರ್ ಅವರ ಶಾಲೆಯಲ್ಲಿ ಫೀಸ್ ಎಷ್ಟಿದೆ ಎಂಬ ಮಾಹಿತಿಯನ್ನ ಇದೀಗ ನೀಡಿದ್ದಾರೆ.

ಡಿಕೆಶಿ ಹೇಳಿದ್ದೇನು?
ನಾನು ಸಹ ಬೆಂಗಳೂರಿನಲ್ಲಿ ಸ್ಕೂಲ್ ನಡೆಸುತ್ತಿದ್ದೇನೆ. ಅಲ್ಲೂ ಸಹ ಸಿಬಿಎಸ್ ಸಿಲಬಸ್ ಇದೆ. ಶಿಕ್ಷಣ ಸಂಸ್ಥೆಯಲ್ಲಿ ನನಗೆ 25 ವರ್ಷದ ಅನುಭವವಿದೆ. ನನಗೆ ಈಗ ಸಮಯ ಇಲ್ಲ ಅಂತ ಮಕ್ಕಳಿಗೆ ಜವಾಬ್ದಾರಿಯನ್ನ ವಹಿಸಿದ್ದೇನೆ. ಎಲ್ಲರಿಗೂ ಕ್ವಾಲಿಟಿ ಎಜುಕೇಷನ್ ಕೊಡಬೇಕು. ನನ್ನ ಖಾಸಗಿ ಶಾಲೆಯಲ್ಲಿ ಸಿಬಿಎಸ್ ಸಿಲಬಸ್ ಗೆ ಒಂದು ಲಕ್ಷದ ಐವತ್ತು ಸಾವಿರ ಶುಲ್ಕವನ್ನ ನಿಗದಿ ಮಾಡಲಾಗಿದೆ. ಅದೇ ಮಂಡ್ಯದಲ್ಲಿ 40 ಸಾವಿರ ಇದೆ. ಗ್ರಾಮೀಣ ಭಾಗಕ್ಕೆ ನಾನೊಂದು ಸ್ಕೀಮ್ ಯೋಚನೆ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಸಾವಿರ ಶಾಲೆಗಳು ಅಂದರೆ ಎರಡರಿಂದ ಮೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಇದೇ ಮಾದರಿಯ ಸ್ಕೂಲ್ ಗಳನ್ನ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

Comments are closed.