Murder: ಮದುವೆ ಸಂಭ್ರಮದಲ್ಲಿದ್ದ ಮಗನನ್ನು ಕಲ್ಲಿನಿಂದ ಹೊಡೆದು ಕೊಂದ ತಂದೆ!

Share the Article

Murder: ಬೆಳಗಾವಿ ತಾಲ್ಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದ ಮಂಜುನಾಥ್ ಎಂಬಾತನಿಗೆ ಮಾರ್ಚ್.12ರಂದು ಮದುವೆ ಫಿಕ್ಸ್ ಆಗಿತ್ತು. ಆದ್ರೆ ಮದುವೆ ಖುಷಿಯಲ್ಲಿದ್ದಂತ ಮಗನನ್ನೇ ತಂದೆಯೊಬ್ಬ ಕಲ್ಲಿನಿಂದ ಹೊಡೆದು ಕೊಂದಿರುವಂತ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮಂಜುನಾಥ್ ಕುಡಿದು ಬಂದು ಗಲಾಟೆ ಮಾಡಿದ್ದು, ಎಷ್ಟೇ ಕುಡಿತ ಬಿಡಿಸೋದಕ್ಕೆ ಪ್ರಯತ್ನಿಸಿದರೂ ಬಿಟ್ಟಿಲ್ಲ.
ಮದುವೆ ದಿನ ಹತ್ತಿರ ಬಂದಿದೆ. ಈಗಲಾದರೂ ಸರಿಯಾಗಿ ಇರು ಎಂದು ತಂದೆ ನಾಗಪ್ಪ ಹಾಗೂ ಸಹೋದರ ಗುರುಬಸಪ್ಪ ಬುದ್ಧಿವಾದ ಹೇಳಿದ್ದಾರೆ.

ಆದರೆ ತಂದೆ ಮಾತು ಕೇಳದೆ ಕುಡಿದ ಮತ್ತಿನಲ್ಲಿ ಮಂಜುನಾಥ್ ಉಳ್ಳಾಗಡ್ಡಿ ಗಲಾಟೆ ಜೋರಾಗಿ ಮಾಡಿದ್ದಾನೆ. ಇದರಿಂದ ಬೇಸತ್ತಂತ ತಂದೆ ನಾಗಪ್ಪ ಹಾಗೂ ಗುರಬಸಪ್ಪ ಇಬ್ಬರು ಸೇರಿ ಕಲ್ಲಿನಿಂದ ಹೊಡೆದಿದ್ದಾರೆ (Murder) . ತಲೆಗೆ ಕಲ್ಲಿನಿಂದ ಹೊಡೆದ ಕಾರಣ ತೀವ್ರವಾಗಿ ಗಾಯಗೊಂಡಿದ್ದಂತ ಮಂಜುನಾಥ್ ಉಳ್ಳಾಗಡ್ಡಿ(25) ಸಾವನ್ನಪ್ಪಿದ್ದಾರೆ.

ಇದೀಗ ಸಹೋದರ ಮಂಜುನಾಥ್ ಹತ್ಯೆ ಕೇಸಲ್ಲಿ ತಂದೆ ನಾಗಪ್ಪ ಹಾಗೂ ಗುರುಬಸಪ್ಪ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Comments are closed.