Tumakur: ಮಹಿಳೆಯರ ಒಳಉಡುಪು ಕದಿಯುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ – ಕಾರಣ ಆಗುತ್ತಾ ಆದರೆ ಶಾಕ್ ಆಗುತ್ತೀರಿ !!

Tumakuru: ತುಮಕೂರಿನ(Tumakuru) ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್ ಎಂಬಾತ ಕಾಲೇಜು ಮುಗಿಯುತ್ತಿದ್ದಂತೆ ಹೊರಗಡೆ ಮಹಿಳೆಯರು ಬಿಸಿಲಿಗೆ ಒಣಗಿ ಹಾಕಿದಂತಹ ಒಳ ಉಡುಪುಗಳನ್ನು ಎಗರಿಸುತ್ತ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ವೇಳೆ ಈತ ಅಚ್ಚರಿ ಸತ್ಯವನ್ನು ಹೊರ ಹಾಕಿದ್ದಾನೆ.

ಮೂಲತಃ ಚಿಕ್ಕನಾಯಕನಹಳ್ಳಿಯವನಾದ ಶರತ್ ತುಮಕೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ. ತುಮಕೂರು ನಗರದ ಅಶೋಕನಗರ ಎಸ್ಐಟಿ ಬ್ಯಾಕ್ ಗೇಟ್ ಎಸ್ ಎಸ್ ಪುರಂ ಸೇರಿದಂತೆ ಹಲವೆಡೆ ಈತ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿಯರು ತಮ್ಮ ಒಳ ಉಡುಪುಗಳು ಕಾಣೆಯಾಗಿರುವುದನ್ನು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯರು ತಮ್ಮ ಮನೆ ಮಾಲೀಕರಿಗೆ ತಿಳಿಸಿದ್ದು, ಮನೆ ಮಾಲೀಕರು ಮಾರ್ಚ್ 7 ರಂದು ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪೊಲೀಸರು ಶರತ್ ನನ್ನು ಬಂಧಿಸಿದ್ದರು. ವಿಚಾರಣೆಯ ಸಮಯದಲ್ಲಿ ಶರತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಎಸ್ಐಟಿ ಪ್ರದೇಶ, ಎಸ್ಎಸ್ ಪುರಂ ಮತ್ತು ಅಶೋಕನಗರ ಸೇರಿದಂತೆ ನಗರದ ಹಲವು ಸ್ಥಳಗಳಲ್ಲಿ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ. ವಯಸ್ಕರ ಚಲನಚಿತ್ರಗಳನ್ನು ನೋಡುವ ವ್ಯಸನದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.