China: ಕೋವಿಡ್‌ಗೆ ಚೀನಾ ನೇರ ಹೊಣೆ; ಅಮೆರಿಕ ಕೋರ್ಟ್ ಮಹತ್ವದ ತೀರ್ಪು, 2.09 ಲಕ್ಷ ಕೋಟಿ ದಂಡ

China: ಕೋವಿಡ್-19 ಸಾಂಕ್ರಾಮಿಕ ಹರಡಲು ಚೀನಾ ಸರಕಾರ ನೇರ ಹೊಣೆ ಎಂದು ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಲಯ ಹೇಳಿದ್ದು, ಜೊತೆಗೆ 2.09 ಲಕ್ಷ ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.

ಚೀನಾ ಸರಕಾರ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವ ಸಮಯದಲ್ಲಿ ಪಿಪಿಇ ಕಿಟ್‌ಗಳ ಮೇಲೆ ಏಕಸ್ವಾಮ್ಯ ಸಾಧಿಸಲು ಮುಂದಾಗುವ ಮೂಲಕ ಜನರ ಮಾರಣಹೋಮಕ್ಕೆ ಕಾರನವಾಗಿದೆ ಎಂದು ಅಮೆರಿಕದ ಮಿಸ್ಸೌರಿ ಫೆಡರಲ್ ನ್ಯಾಯಾಧೀಶ ಸ್ಠೀಫನ್ ಎನ್.ಲಿಂಬೌಫ್ ಆದೇಶದಲ್ಲಿ ಹೇಳಿದ್ದಾರೆ.
ಜನರ ಸಾವಿನ ಜೊತೆ ಚೆಲ್ಲಾಟ, ಸಾಂಕ್ರಾಮಿಕ ರೋಗದ ಮಾಹಿತಿ ಮುಚ್ಚಿಟ್ಟ ಆರೋಪ ಜೊತೆಗೆ ಚಿಕಿತ್ಸಾ ಉಪಕರಣಗಳ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಲು ಪ್ರಯತ್ನ ಬೇರೆ ದೇಶಗಳಿಗೆ ದುಪ್ಪಟ್ಟು ಬೆಲೆಗೆ ಪಿಪಿಇ ಕಿಟ್ ಮಾರಾಟ ಇವೆಲ್ಲ ಆರೋಪ ಚೀನಾ ಮೇಲೆ ಹೊರಿಸಿ 24 ಬಿಲಿಯನ್ ಡಾಲರ್ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ವೈರಸನ್ನು ಚೀನಾದ ವುಹಾನ್ ಲ್ಯಾಬ್‌ನಲ್ಲಿ ಸೃಷ್ಟಿ ಮಾಡಲಾಗಿದೆ. ಪಿಪಿಇ ಕಿಟ್‌ಗಳ ರಫ್ತು ತಡೆಯುವ ಮೂಲಕ ರೋಗ ಉಲ್ಭಣಕ್ಕೆ ಚೀನಾ ಕಾರಣ ಎಂದು ಆರೋಪ ಮಾಡಿ ಮಿಸ್ಸೌರಿ ಫೆಡರಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
Comments are closed.