Hunsur: ರಿಪೀಸ್ ಪಟ್ಟಿ, ಸ್ಕ್ರೂಡ್ರೈವರ್ ನಿಂದ ಚಿಕ್ಕಪ್ಪನಿಂದ ಮಗುವಿನ ಮೇಲೆ ಹಲ್ಲೆ!

Hunsur: ಮಗುವಿನ ಮೇಲೆ ಚಿಕ್ಕಪ್ಪನೋರ್ವ ಮಾರಣಾಂತಿಕ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ಘಟನೆ ಬೀರನಹಳ್ಳಿಯಲ್ಲಿ ನಡೆದಿದೆ. ತನ್ನ ಮಾತು ಕೇಳಿಲ್ಲ ಎಂದು ಹನಗೋಡು ಹೋಬಳಿ ಗ್ರಾಮದ ಆನಂದ್ ಎಂಬಾತ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಈತನನ್ನು ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆರೋಪಿ ಆನಂದನ ಪತ್ನಿಯ ಅಕ್ಕನ ಮಗಳಾದ ಮಗು ತನ್ನ ಮಾತು ಕೇಳಲಿಲ್ಲವೆಂದು ಕೋಪಗೊಂಡ ಆನಂದ ರಿಪೀಸ್ ಪಟ್ಟಿ, ಸ್ಕ್ರೂಡ್ರೈವರ್ ನಿಂದ ಮಗುವಿನ ಮೇಲೆ ಹಲ್ಲೆ ಮಾಡಿದ ಪರಿಣಾಮ ಬಾಲಕಿಯ ಎರಡೂ ಕೈಗಳ ಮೂಳೆ ಮುರಿದಿದ್ದು, ತಲೆಗೂ ಪಟ್ಟಾಗಿದೆ.
ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆರೋಪಿ ಘಟನೆಯ ನಂತರ ಆಟೋದಲ್ಲಿ ಪರಾರಿಯಾಗದ್ದ. ನಂತರ ಆತನನ್ನು ಬೆಳವಾಡಿಯಲ್ಲಿ ಬಂಧನ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.