Eshwar B Khandre: ನದಿಗಳ ಸಮೀಪ ಸೋಪು, ಶಾಂಪೂ ಬಳಕೆ ನಿಷೇಧ-ಅರಣ್ಯ ಸಚಿವ ಈಶ್ವರ ಖಂಡ್ರೆ

Eshwar B Khandre: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿಯ ದಂಡೆ, ಸ್ನಾನಘಟ್ಟದಲ್ಲಿ ಶಾಂಪೂ, ಸೋಪು ಇತ್ಯಾದಿ ಎಸೆದು ಹೋಗುವುದನ್ನು ನಿರ್ಬಂಧಿಸುವ ಮೂಲಕ ನದಿ ನೀರು ಮಲಿನವಾಗದಂತೆ ತಡೆಗಟ್ಟಲು ಮುಂದಾಗಿದ್ದಾರೆ.
ಸ್ನಾನಘಟ್ಟಗಳಲ್ಲಿ ಭಕ್ತರು ಶಾಂಪೂ, ಸೋಪು ಬಳಸಿ ಸ್ನಾನ ಮಾಡಿ ಉಳಿದ ತುಂಡು ಮತ್ತು ಶಾಂಪೂ ಪ್ಯಾಕೆಟ್ ಬಿಟ್ಟು ಹೋಗುತ್ತಿದ್ದು, ಇದೆಲ್ಲ ನದಿ ಸೇರಿ ನೊರೆ ಉಕ್ಕುತ್ತಿದೆ, ನೀರು ಕಲುಷಿತವಾಗುತ್ತಿದೆ. ಈ ಕುರಿತು ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿಯ ಮೂಲಕ ಸೂಚನೆ ನೀಡಿದ್ದಾರೆ.
ಹಾಗಾಗಿ ನದಿ, ಕೊಳ, ಸರೋವರದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ನದಿ, ಸರೋವರ, ಕೊಳ, ಕಲ್ಯಾಣಿಗಳಲ್ಲಿ ಭಕ್ತರು ತಾವು ಉಟ್ಟ ಬಟ್ಟೆಯನ್ನು ವಿಸರ್ಜಿಸದಂತೆ ನಿರ್ಬಂಧಿಸಲೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Comments are closed.