Mangaluru :ಮಂಗಳೂರಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ನಾಪತ್ತೆ ಪ್ರಕರಣ- ಇನ್ನೂ ಪತ್ತೆಯಾಗದ ಮೂಡು ಪೆರಾರದ ನಿತೇಶ್‌ ಬೆಲ್ಚಡ!!

Share the Article

Mangaluru : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿಗಷ್ಟೇ ಬಂಟ್ವಾಳದ ದಿಗಂತ್ ಎಂಬ ವಿದ್ಯಾರ್ಥಿ ನಾಪತ್ತೆ ಪ್ರಕರಣ ರಾಜ್ಯದ್ಯಂತ ಸಂಚಲನ. ಆದರೆ ಕೆಲವೇ ದಿನಗಳಲ್ಲಿ ದಿಗಂತ್ ಪತ್ತೆಯಾಗಿದ್ದು ಪರೀಕ್ಷೆ ಭಯದಿಂದ ಈತ ಮನೆ ಬಿಟ್ಟು ಹೋಗಿದ್ದ ಎಂಬ ವಿಚಾರದಿಂದ ಈ ಕೇಸ್ ಸುಖಾಂತ್ಯ ಕಂಡಿದೆ. ಈ ನಡುವೆಯೇ ಮಂಗಳೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ನಾಪತ್ತೆ ಪ್ರಕರಣ ಸದ್ದು ಮಾಡುತ್ತಿದ್ದು ಮೂಡು ಪೆರಾಲದ ನಿತೇಶ್ ಬೆಲ್ಚಡ ಇನ್ನೂ ಕೂಡ ಪತ್ತೆಯಾಗಿಲ್ಲ.

ಹೌದು, ಬಜಪೆ ಮೂಡು ಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ, ನೀರುಮಾರ್ಗದ ಪ್ಯಾರಾಮೆಡಿಕಲ್‌ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತೇಶ್‌ ಬೆಲ್ಚಡ (19) ಫೆ. 13ರಂದು ನಾಪತ್ತೆಯಾಗಿದ್ದು, ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವ ಸುಳಿವು ಇಲ್ಲಿಯವರೆಗೆ ಸಿಕ್ಕಿಲ್ಲ. ಇದೀಗ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ವಿಶೇಷ ತಂಡ ರಚಿಸಿ ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಪತ್ತೆ ಮಾಡುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಅಂದಹಾಗೆ ನಿತೇಶ್‌ ಫೆ. 13ರಂದು ಕಾಲೇಜಿನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋಗಿದ್ದು, ವಾಪಸು ಮನೆಗೆ ಬಂದಿಲ್ಲ. 5.5 ಅಡಿ ಎತ್ತರ, ಗೋ ಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ನಾಪತ್ತೆಯಾದ ದಿನ ಕೆಂಪು ಬಣ್ಣದ ಟೀ ಶರ್ಟ್‌, ಬಿಳಿ ಬಣ್ಣದ ಪ್ಯಾಂಟ್‌ ಧರಿಸಿದ್ದರು. ಕನ್ನಡ, ತುಳು, ಇಂಗ್ಲಿಷ್‌ ಭಾಷೆ ಮಾತನಾಡುತ್ತಾರೆ. ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.