Karkala: ಅಜೆಕಾರು: ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿ ಸಹಿತ ಪೊಲೀಸ್ ವಶಕ್ಕೆ!

Karkala: ಕಾರ್ಕಳ (Karkala) ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಜೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಹಾಗೂ ಸಾಗಿಸುತ್ತಿದ್ದ ಮರಳನ್ನು ಲಾರಿ ಸಹಿತ ಪೊಲೀಸರು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ರೌಂಡ್ಸ್ ನಲ್ಲಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಕುಕ್ಕುಜೆ ಗ್ರಾಮದ ಬೈಂಟ್ಲ ಎಂಬಲ್ಲಿರುವ ನಿತ್ಯಾನಂದ ಇವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ದಾಳಿ ನಡೆಸಿದಾಗ ಸುಮಾರು 5 ಯುನಿಟ್ ಮರಳು ಅಕ್ರಮ ದಾಸ್ತಾನಿರಿಸಿದ್ದು, ಈ ಬಗ್ಗೆ ನಿತ್ಯಾನಂದ ಇವರಲ್ಲಿ ವಿಚಾರಿಸಿದಾಗ ಪದ್ಮನಾಭ ಮತ್ತು ಅಮಿತ್ ಎಂಬವರು ತನಗೆ ಮರಳು ಪೂರೈಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಮಹಜರು ನಡೆಸಿ ಸ್ಥಳದಲ್ಲಿದ್ದ ರೂ.10,000 ಮೌಲ್ಯದ 5 ಯುನಿಟ್ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Comments are closed.