Ragini: ಕಾರ್ಯಕ್ರಮವೊಂದರಲ್ಲಿ ನಟಿ ರಾಗಿಣಿ ಕೈ ಹಿಡಿದೆಳೆದ ಅಭಿಮಾನಿ: ಕೆನ್ನೆಗೆ ಬಾರಿಸಿದ ನಟಿಯ ವಿಡಿಯೋ ವೈರಲ್

Ragini: ಇತ್ತೀಚೆಗೆ ನಡೆದ ಒಂದು ಸಾಂಗ್ ಲಾಂಚ್ ಇವೆಂಟ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ರಾಗಿಣಿ (Ragini) ಅವರು ಪಿಂಕ್ ಬಣ್ಣದ ಫ್ರಾಕ್ ತೊಟ್ಟು ಎಂಜಿ ರೋಡ್‌ನಲ್ಲಿರುವ ಪಬ್ ಒಂದಕ್ಕೆ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದರು.

ಇವೆಂಟ್ ಕೊನೆ ಹಂತಕ್ಕೆ ತಲುಪಿದಾಗ ಸ್ಟೇಜ್ ಮೇಲೆ ನಿಂತಿದ್ದ ರಾಗಿಣಿ, ಕೆಳಗೆ ಇದ್ದವರಿಗೆ ಸೆಲ್ಪಿಗೆ ಪೋಸ್ ನೀಡಿದ್ದಾರೆ. ಸಾಕಷ್ಟು ಜನ ಫೋಟೋಗಾಗಿ ಮುಗಿಬಿದ್ದರೂ ತುಂಬಾ ಸಮಾಧಾನವಾಗಿಯೇ ರಾಗಿಣಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಮಧ್ಯೆ ಯುವಕನೊಬ್ಬ ರಾಗಿಣಿ ಅವರ ಕೈ ಹಿಡಿದು ಎಳೆದಿದ್ದಾನೆ.
ತಮ್ಮ ಕೈ ಹಿಡಿಯುತ್ತಿದ್ದಂತೆಯೇ ರಾಗಿಣಿ ಕೋಪಗೊಂಡು ಆತನ ಕೆನ್ನೆಗೆ ರಪ್ ಅಂತ ಬಾರಿಸಿದ್ದಾರೆ. ಪಬ್‌ನಲ್ಲಿದ್ದವರೆಲ್ಲಾ ಒಂದು ಕ್ಷಣ ಶಾಕ್ ಆಗಿ ಬಿಟ್ಟಿದ್ದಾರೆ. ಕೂಡಲೇ ಆ ಯುವಕನನ್ನು ಹೊರ ದಬ್ಬಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ರಾಗಿಣಿ ನಡೆ ಕುರಿತು ಪರ ವಿರೋಧ ಚರ್ಚೆಗಳು ಆಗುತ್ತಿದೆ.
Comments are closed.