Crime News: ಪ್ರೇಯಸಿ, ಆಕೆಯ ಮಗನನ್ನು ಹತ್ಯೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ!

Crime News: ಪ್ರೇಯಸಿ ಮತ್ತು ಆಕೆಯ ಮಗನನ್ನು ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಆರೋಪಿ ಶೇಖಪ್ಪ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಸಿಸಿಹೆಚ್-51ರ ನ್ಯಾಯಾಧೀಶರಾದ ಸಂತೋಷ್ ಆದೇಶ ಹೊರಡಿಸಿದ್ದಾರೆ.
ಗಂಡನಿಂದ ಬೇರಾಗಿ ಇಬ್ಬರು ಮಕ್ಕಳ ಜೊತೆ ನವನೀತ ವಾಸವಾಗಿದ್ದರು. ಈ ಸಮಯದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಶೇಖಪ್ಪನ ಪರಿಚಯವಾಗಿದೆ. ನಂತರ ಸ್ನೇಹ, ಆತ್ಮೀಯತೆ ಬೆಳೆದಿದೆ. ಇದರ ನಡುವೆ ಮತ್ತೋರ್ವ ವ್ಯಕ್ತಿ ಜೊತೆ ನವನೀತ ಓಡಾಡುತ್ತಿದ್ದುದ್ದನ್ನು ತಿಳಿದು ಕೋಪಗೊಂಡ ಈತ ಗಲಾಟೆ ತೆಗೆದು ಮನೆಯಲ್ಲಿ ಚಾಕುವಿನಿಂದ ಚುಚ್ಚಿ ಆರೋಪಿ ಕೊಲೆ ಮಾಡಿದ್ದಾನೆ.
ಈ ಕೊಲೆಯನ್ನು ನೋಡಿದ ಆಕೆಯ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಈತ. ನಂತರ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿಯ ಬಂಧನ ಮಾಡಲಾಗಿತ್ತು.
Comments are closed.