Tejasvi Surya Reception: ಇಂದು ತೇಜಸ್ವಿ ಸೂರ್ಯ-ಶಿವಶ್ರೀ ರೆಸೆಪ್ಷನ್‌; ಹೂ ಬೊಕ್ಕೆ, ಡ್ರೈಫ್ರೂಟ್ಸ್‌ ತರದಿರಿ ಎಂದ ಸಂಸದ

Share the Article

Tejasvi Surya Reception: ಮಾ.5 ಮತ್ತು 6 ರಂದು ಕನಕಪುರದ ರೆಸಾರ್ಟ್‌ನಲ್ಲಿ ಬಿಜೆಪಿ ಯುವ ಸಂಸದ ತೇಜಸ್ವಿಸೂರ್ಯ ಹಾಗೂ ಶಿವಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ(ಇಂದು) ಆರತಕ್ಷತೆ ಇದ್ದು, ತನ್ನ ಆತ್ಮೀಯರಿಗೆ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನ ವೃಕ್ಷ, ಗಾಯತ್ರಿ ವಿಹಾರ, ಪ್ಯಾಲೇಸ್‌ ಮೈದಾನದಲ್ಲಿ ರಿಸೆಪ್ಷನ್‌ ನಡೆಯಲಿದೆ. ಜೊತೆಗೆ ಆರತಕ್ಷತೆಗೆ ಬರುವ ಅಭಿಮಾನಿಗಳಿಗೆ ತೇಜಸ್ವಿ ಸೂರ್ಯ ಅವರು ಒಂದು ಮನವಿಯನ್ನು ಮಾಡಿದ್ದಾರೆ.

ನನ್ನ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಹೂ ಬೊಕ್ಕೆಗಳು, ಡ್ರೈ ಫ್ರೂಟ್ಸ್‌ ಗಳನ್ನು ದಯವಿಟ್ಟು ತರಬೇಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ವೀಡಿಯೋ ಇಲ್ಲಿದೆ.

Comments are closed.