Kannur: ಯೂಟ್ಯೂಬ್ ನೋಡಿ ಡಯೆಟ್ ಮಾಡಿದ ವಿದ್ಯಾರ್ಥಿನಿ ಸಾವು!

Kannur: ಕೇರಳದ ಕಣ್ಣೂರಿನಲ್ಲಿ ಯುವತಿಯೋರ್ವಳು ಯೂಟ್ಯೂಬ್‌ನಲ್ಲಿದ್ದ ತೂಕ ಕಡಿಮೆ ಮಾಡುವ ಡಯೆಟ್ ಪ್ಲಾನ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ವಿದ್ಯಾರ್ಥಿನಿ ಎಂ.ಶ್ರೀನಂದ (18 ವರ್ಷ) ಸಾವನ್ನಪ್ಪಿದ ಯುವತಿ.
ಮಟ್ಟನ್ನೂರಿನ ಪಳಸ್ಸಿ ರಾಜಾ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದಳು ಈಕೆ.
ಶ್ರೀನಂದ ಕಳೆದ ಕೆಲ ಸಮಯದಿಂದ ಯೂಟ್ಯೂಬ್‌ನಲ್ಲಿ ವಿಡಿಯೋಸ್ ನೋಡಿಕೊಂಡು ಅದರಲ್ಲಿ ಬರುತ್ತಿದ್ದ ಡಯಟ್ ಪ್ಲಾನ್ ಮಾಡುತ್ತಿದ್ದಳು. ಹೀಗಾಗಿ ಆಕೆ ಊಟ ಮಾಡುವುದನ್ನು ಕಡಿಮೆ ಮಾಡಿದ್ದಳು. ಈ ಕಾರಣದಿಂದ ದಿನಕಳೆದಂತೆ ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.
ಆಕೆಯ ಆರೋಗ್ಯ ಹದಗೆಟ್ಟ ಪರಿಣಾಮ ತಲಶ್ಶೇರಿ ಸಹಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶ್ರೀನಂದ ಮೃತ ಹೊಂದಿದ್ದಾಳೆ.
Comments are closed.