Arecanut : ಬಜೆಟ್ ಮಂಡನೆ ಬಳಿಕ ಅಡಿಕೆ ದರದಲ್ಲಿ ಭಾರಿ ಏರಿಕೆ

Arecanut : ರಾಜ್ಯದಲ್ಲಿ ಬಜೆಟ್ ಮಂಡನೆಯಾದ ಬಳಿಕ ಹೊಸ ಅಡಿಕೆ ದರದಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಹೌದು, ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 400 ರೂ. ತಲುಪಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ.8ರಂದು ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 390 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 400 ರೂ.ಇತ್ತು. ಸಿಂಗಲ್ ಚೋಲ್ 455 ರೂ., ಡಬ್ಬಲ್ ಚೋಲ್ 495 ರೂ. ಇದ್ದು ಧಾರಣೆ ಸ್ಥಿರವಾಗಿತ್ತು.
Comments are closed.