Bantwala : ರೈಲ್ವೆ ಹಳಿ ಬಳಿ ಚಪ್ಪಲಿ ಬಿಚ್ಚಿಟ್ಟು ತಾನೇ 3 ಹನಿ ರಕ್ತ ಸುರಿದಿದ್ದ ದಿಗಂತ್!!

Bantwala : ಬಂಟ್ವಾಳದ ದಿಗಂತ್ ನಾಪತ್ತೆ ಪ್ರಕರಣ ರಾಜ್ಯದ್ಯಂತ ಸಂಚಾಲನ ಸೃಷ್ಟಿಸಿತ್ತು. ಇದೀಗ ದಿಗಂತ್ ಪತ್ತೆಯಾಗಿ ಈ ಪ್ರಕರಣ ಸುಕಾಂತ್ಯವನ್ನು ಕಂಡಿದೆ. ಆದರೆ ದಿಗಂತ ನಾಪತ್ತೆಯಾಗಿದ್ದ ವಿಚಾರವೇ ಒಂದು ಕುತೂಹಲವಾಗಿದೆ. ಯಾಕೆಂದರೆ ವಿಗಾಂತಿ ಪರೀಕ್ಷೆ ಭಯದಿಂದ ಮನೆ ಬಿಟ್ಟಿದ್ದ ಎಂಬ ಸುದ್ದಿ ಇದೀಗ ಪೊಲೀಸರ ತನಿಖೆಯಲ್ಲಿ ಬರೆಯಲಾಗಿದೆ.

ಹೌದು, ನಗರದ ಕಪಿತಾನಿಯೋದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಪರೀಕ್ಷೆಗೆ ಹೆದರಿ ಊರು ಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದನಲ್ಲದೆ ಕಳೆದ 12 ದಿನದಿಂದ ತಾನು ಎಲ್ಲೆಲ್ಲಿಗೆ ಹೋಗಿದ್ದೆ ಎಂಬುದನ್ನು ವಿವರಿಸಿರುವುದಾಗಿ ತಿಳಿದು ಬಂದಿದೆ.
ಅಂದಹಾಗೆ ಫೆ.25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದ ದಿಗಂತ್ ತನ್ನ ಚಪ್ಪಲಿಯನ್ನು ರೈಲ್ವೆ ಹಳಿಯ ಬಳಿ ಕಳಚಿಟ್ಟಿದ್ದ. ಅಲ್ಲದೆ ಮೂರು ಹನಿ ರಕ್ತವನ್ನು ಅದರ ಮೇಲೆ ಸುರಿದಿದ್ದ. ತನ್ನ ಸ್ನೇಹಿತನಿಂದ ಮೊದಲೇ ಪಡೆದಿದ್ದ ಶೂವನ್ನು ಧರಿಸಿ ಫರಂಗಿಪೆಟೆಯಿಂದ ಅರ್ಕುಳದವರೆಗೆ ರೈಲ್ವೆ ಹಳಿಯಲ್ಲೇ ನಡೆದುಕೊಂಡು ಹೋಗಿದ್ದ. ಬಳಿಕ ಅದೇ ದಾರಿಯಾಗಿ ಬಂದ ಬೈಕೊಂದಕ್ಕೆ ಏರಿದ್ದ. ನಂತರ ಬಸ್ಸಿನಲ್ಲಿ ಶಿವಮೊಗ್ಗ ಮತ್ತು ಅಲ್ಲಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಮೈಸೂರಿನಿಂದ ಕೆಂಗೇರಿಗೆ ತೆರಳಿದ್ದ. ನಂತರ ನಂದಿಹಿಲ್ಸ್ಗೆ ಹೋಗಿದ್ದ. ಅಲ್ಲಿ ಎರಡು ದಿನ ಏನೋ ಕೆಲಸ ಮಾಡಿ ಬಳಿಕ ಮೈಸೂರಿಗೆ ಬಂದಿದ್ದ. ಅಲ್ಲಿಂದ ಉಡುಪಿಗೆ ಶನಿವಾರ ಬೆಳಗ್ಗೆ ಹೋಗಿದ್ದ ಎನ್ನಲಾಗಿದೆ.
Comments are closed.