Mangalore: ವಿದ್ಯಾರ್ಥಿ ನಾಪತ್ತೆ ಪ್ರಕರಣ; ಪರೀಕ್ಷೆ ಭಯಕ್ಕೆ ಮನೆ ಬಿಟ್ಟಿದ್ದ ದಿಗಂತ್!

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಮಾ.12ರಂದು ಕೋರ್ಟಿಗೆ ಮಾಹಿತಿ ನೀಡಲೇಬೇಕಾದ ಅನಿರ್ವಾಯತೆ ಪೊಲೀಸರ ಮೇಲಿತ್ತು. ಅಲ್ಲದೆ ಶನಿವಾರ ಬೆಳಗ್ಗೆ ಫರಂಗಿಪೇಟೆ, ವಳಚ್ಚಿಲ್ ಆಸುಪಾಸಿನಲ್ಲಿ ಪೊಲೀಸ್ ಡಾಗ್ ಸ್ಕ್ಯಾಡ್ ಕರೆಸಿ ಕೂಡಾ ಶೋಧ ಕಾರ್ಯ ಮಾಡಿದ್ದರು. ಇನ್ನೊಂದು ಕಡೆ ಮನೆ ಮಂದಿ ಕೂಡಾ ದೇವರಿಗೆ ಹರಕೆ ಹಾಕಿ ಕಣ್ಣಿಗೆ ಎಣ್ಣೆ ಹಾಕಿ ಮಗ ಬರಲಿ ಎಂದು ಕಾಯುತ್ತ ಇದ್ದರು.

ನಿನ್ನೆ (ಶನಿವಾರ) ಸಂಜೆ ದಿಗಂತ್ ಉಡುಪಿಯ ಡಿ ಮಾರ್ಟ್‌ನಲ್ಲಿ ಪ್ರತ್ಯಕ್ಷನಾಗಿದ್ದಾನೆ ಎನ್ನುವ ಸುದ್ದಿಯೊಂದು ಬಂತು. ಅನಂತರ ಎಲ್ಲಾ ಕಡೆ ಈ ಸುದ್ದಿ ಹಬ್ಬಿತು. ಮನೆ ಮಂದಿ, ಸ್ಥಳೀಯ ಜನರೆಲ್ಲ ಸೇರಿ ದಿಗಂತ್ ಮನೆಗೆ ಬರುತ್ತಾನೆಂದು ಅವರ ಮನೆಯಲ್ಲಿ ಸೇರಿದ್ದರು. ಆದರೆ ಹತ್ತು ದಿನದಿಂದ ನಾಪತ್ತೆಯಾಗಿದ್ದ ಹುಡುಗನನ್ನು ಪೊಲೀಸರು ಆತನನ್ನು ಮನೆಗೆ ಕಲಿಸಿಲ್ಲ. ಆತನನ್ನು ಗುಪ್ತ ಜಾಗದಲ್ಲಿ ಚೆನ್ನಾಗಿ ಊಟ, ತಿಂಡಿ ಎಲ್ಲಾ ಕೊಟ್ಟು ವಿಚಾರಣೆ ಮಾಡಿದ್ದಾರೆ.
ವರದಿ ಪ್ರಕಾರ, ಫೆ.25 ರಂದು ದಿಗಂತ್ ನಾಪತ್ತೆಯಾಗಿದ್ದು, ಆತ ಅಂದೇ ಶಿವಮೊಗ್ಗ ಬಸ್ ಹತ್ತಿದ್ದಾನೆ. ರೈಲ್ವೇ ಟ್ರಾಕ್ ನಲ್ಲಿ ಚಪ್ಪಲಿ ಕಳಚಿ ಗೆಳೆಯನಿಂದ ತರಿಸಿದ್ದ ಶೂ ಧರಿಸಿದ್ದ. ಆ ಕ್ಷಣ ಒಂದು ಕ್ರಿಮಿನಲ್ ಐಡಿಯಾ ಬಳಸಿದ್ದಾನೆ ದಿಗಂತ್.
ಮೈಸೂರಿಗೆ ಹೋಗಿದ್ದಾನೆ ಅಲ್ಲಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಒಂದೆರಡು ದಿನ ಅಲ್ಲಿ ಇಲ್ಲಿ ತಿರುಗಾಡಿದಾನೆ. ಕೈಯಲ್ಲಿದ್ದ ಹಣ ಮುಗಿದಾಗ ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ಮೂರು ದಿನಗಳ ಕಾಲ ಕೆಲಸ ಮಾಡಿ, ಕೈಯಲ್ಲಿ ಸ್ವಲ್ಪ ಹಣ ಬಂದಾಗ ಮತ್ತೆ ಅಲ್ಲಿಂದ ಹೊರಟಿದ್ದಾನೆ.
ನಂತರ ಅಲ್ಲಿಂದ ಬಸ್ಸಿನ ಮೂಲಕ ಶಿವಮೊಗ್ಗಕ್ಕೆ ಬಂದಿದ್ದಾನೆ. ಅಲ್ಲಿಂದ ಮತ್ತೆ ಮೈಸೂರಿಗೆ ಹೋಗಿದ್ದಾನೆ. ಶುಕ್ರವಾರ ರಾತ್ರಿ ಮತ್ತೆ ಮೈಸೂರಿನಿಂದ ಮುರ್ಡೇಶ್ವರ ತೆರಳುವ ರೈಲು ಸಿಕ್ಕಿದೆ. ಅದರಲ್ಲಿ ಹತ್ತಿದ್ದು, ಉಡುಪಿ ಬಂದಾಗ ಅಲ್ಲಿ ಇಳಿದಿದ್ದಾನೆ. ಏನು ಮಾಡುವುದು ಎನ್ನುವ ಯೋಚನೆಯಲ್ಲಿರುವಾಗಲೇ ಎದುರಿಗೆ ಡಿಮಾರ್ಟ್ ಕಂಡಿದೆ. ಮಧ್ಯಾಹ್ನ ಸಮಯವಾಗಿದ್ದರಿಂದ ಡಿಮಾರ್ಟ್‌ಗೆ ಹೋಗಿದ್ದಾನೆ. ಅಲ್ಲಿ ಅತ್ತ ಇತ್ತ ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ಕಂಡು ಸಿಬ್ಬಂದಿ ವಿಚಾರಣೆ ಮಾಡಿದಾಗ, ಈತನನ್ನು ಎಲ್ಲೋ ನೋಡಿದ ನೆನಪಿನಿಂದ ಸಿಬ್ಬಂದಿ ನೀನು ದಿಗಂತ್ ಅಲ್ವಾ ಎಂದು ಕೇಳಿದ್ದಾರೆ.
ಆತ ಅಲ್ಲಿ ಕೂಡಾ ಎಸ್ಕೇಪ್ ಆಗಲು ಟ್ರೈ ಮಾಡಿದ್ದಾನೆ. ಆದರೂ ಅವರು ಆತನನ್ನು ತಡೆದು, ಮನೆಯವರ ನಂಬರ್ ಪಡೆದು ಫೋನ್ ಮಾಡಿದ್ದಾರೆ. ದಿಗಂತ್ ತಾಯಿ ಜೊತೆ ಮಾತನಾಡಿದ್ದಾನೆ. ತಪ್ಪು ಮರೆಮಾಚಲು ನನ್ನನ್ನು ಯಾರೋ ಎತ್ತಾಕ್ಕೊಂಡು ಹೋಗಿದ್ದರು ಅಮ್ಮಾ ಎಂದು ಸುಳ್ಳು ಹೇಳಿದ್ದಾನೆ.
ಶನಿವಾರ ಮನೆಯ ಮುಂದೆ ಬೆಳಗ್ಗೆ ರೈಲು ಹಳಿಯಲ್ಲಿಯೇ ಮುರ್ಡೇಶ್ವರ ರೈಲು ಹೋಗಿತ್ತು. ಅಲ್ಲಿ ಆತ ಪೊಲೀಸರು ಹುಡುಕಾಟ ಮಾಡುವುದನ್ನೂ ಕಂಡಿದ್ದಾನೆ. ಇದನ್ನು ಈತ ವಿಚಾರಣೆ ಸಂದರ್ಭದಲ್ಲಿ ಪೊಲೀಸರಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ. ಇದೆಲ್ಲಾ ಕೇಳಿದ ಪೊಲೀಸರು ಯಾಕೆ ನೀನು ಹೀಗೆ ಮಾಡಿದೆ? ಏನು ಸಮಸ್ಯೆ ಎಂದು ಕೇಳಿದಾಗ, ನಂಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಮನೆ ಮಂದಿ ನನಗೆ ಬೈದಿದ್ದರು. ಪಿಯುಸಿ ಫೈನಲ್ ಪರೀಕ್ಷೆ ಕೂಡಾ ಶುರುವಾಗಿತ್ತು. ಇದರಿಂದ ಮನೆ ಬಿಟ್ಟು ಹೋದೆ. ಬೇರೆನೂ ಇಲ್ಲ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
Comments are closed.