Maharashtra: ಟ್ರಾಫಿಕ್ ಸಿಗ್ನಲ್‌ನಲ್ಲಿ BMW ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿದ ಆರೋಪಿ, ವಿಡಿಯೋ ವೈರಲ್!

Maharashtra: ಮಹಾರಾಷ್ಟ್ರದ ಪುಣೆಯಲ್ಲಿ, ಬಿಎಂಡಬ್ಲ್ಯು ಕಾರಿನಿಂದ ಇಳಿದ ವ್ಯಕ್ತಿಯೋರ್ವ ಟ್ರಾಫಿಕ್ ಸಿಗ್ನಲ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಮತ್ತು ಅಶ್ಲೀಲ ಕೃತ್ಯಗಳನ್ನು ಮಾಡಿದ್ದು, ಹೀಗಾಗಿ ಇಬ್ಬರು ಆರೋಪಿಗಳನ್ನು ಶನಿವಾರ (ಮಾರ್ಚ್ 8) ರಾತ್ರಿ ಸತಾರಾ ಜಿಲ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ಬಗ್ಗೆ ಮಾಹಿತಿ ಪಡೆದ ನಂತರ ಕಾರ್ ಚಾಲಕ ಗೌರವ್ ಅಹುಜಾ ಮತ್ತು ಅವರ ಸಹಚರ ಭಾಗ್ಯೇಶ್ ಓಸ್ವಾಲ್ ವಿರುದ್ಧ ಯರವಾಡ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಗಲಭೆ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಭಾಗ್ಯೇಶ್ ಓಸ್ವಾಲ್ ಅವರನ್ನು ಆತನ ಮನೆಯಿಂದ ಬಂಧಿಸಲಾಯಿತು ಮತ್ತು ನಂತರ ಗೌರವ್ ಅಹುಜಾ ಅವರನ್ನು ಸತಾರಾದ ಕರಡ್ ತಹಸಿಲ್‌ನಿಂದ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಓಸ್ವಾಲ್ ನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಯರವಾಡ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಪುಣೆಯ ಯೆರವಾಡ ಪ್ರದೇಶದಲ್ಲಿರುವ ಶಾಸ್ತ್ರಿ ಚೌಕ್‌ನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗೌರವ್ ಅಹುಜಾ ಬಿಎಂಡಬ್ಲ್ಯು ಕಾರಿನಿಂದ ಕೆಳಗಿಳಿದು ರಸ್ತೆಯ ಮಧ್ಯದಲ್ಲಿ ಮಹಿಳೆಯರ ಮುಂದೆ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದ. ಗೌರವ್‌ನ ಈ ಅಶ್ಲೀಲ ಕೃತ್ಯವನ್ನು ಕಂಡು ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ನಿಲ್ಲಿಸಿ ತನ್ನ ಮೊಬೈಲ್ ನಲ್ಲಿ ಯುವಕನ ಈ ಅಶ್ಲೀಲ ಕೃತ್ಯವನ್ನು ರೆಕಾರ್ಡ್ ಮಾಡಲು ಆರಂಭಿಸಿದ್ದಾನೆ. ಈ ಸಮಯದಲ್ಲಿ ಗೌರವ್ ಮೊಬೈಲ್ ಕ್ಯಾಮೆರಾದ ಮುಂದೆಯೂ ತನ್ನ ಚೇಷ್ಟೆಗಳನ್ನು ಬಿಡಲಿಲ್ಲ.
ಆತನ ಜೊತೆಗಿದ್ದ ಭಾಗ್ಯೇಶ್ ಓಸ್ವಾಲ್ ಬಿಎಂಡಬ್ಲ್ಯು ಕಾರಿನಲ್ಲಿ ಕುಳಿತಿದ್ದು, ಮೊಬೈಲ್ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಆಗುತ್ತಿರುವುದನ್ನು ನೋಡಿ ಮದ್ಯದ ಬಾಟಲಿಯನ್ನು ಮರೆಮಾಡಲು ಪ್ರಯತ್ನ ಪಟ್ಟ. ಬಳಿಕ ಇಬ್ಬರೂ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರನ್ನು ಅತಿವೇಗದಲ್ಲಿ ಓಡಿಸುತ್ತಿದ್ದ.
ವೀಡಿಯೊ ವೈರಲ್ ಆದ ನಂತರ, ಆರೋಪಿ ಅಹುಜಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದು, ತನ್ನ ಕಾರ್ಯಗಳಿಗಾಗಿ ಕ್ಷಮೆಯಾಚಿಸಿದ್ದಾರೆ. “ದಯವಿಟ್ಟು ನನಗೆ ಒಂದು ಅವಕಾಶ ನೀಡಿ. ಮುಂದಿನ ಎಂಟು ಗಂಟೆಗಳಲ್ಲಿ ನಾನು ಶರಣಾಗುತ್ತೇನೆ” ಎಂದು ಅಹುಜಾ ವಿಡಿಯೋದಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ.
Comments are closed.