Ujire: ಉಜಿರೆ; ಬೈಕ್‌-ಸ್ಕೂಟರ್‌ ಅಪಘಾತ- ಸ್ಕೂಟರ್‌ ಸವಾರ ಸಾವು!

Share the Article

Ujire: ಮಾ.07 ರಂದು ರಾತ್ರಿ ಸ್ಕೂಟರ್‌ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಭಾರತ್‌ ಆಟೋ ಕಾರ್‌ ಸಂಸ್ಥೆಯ ಸಮೀಪ ಈ ಅಪಘಾತ ನಡೆದಿದೆ.

ಉಜಿರೆಯಿಂದ ಚಾರ್ಮಾಡಿ ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್‌ ಸವಾರ ಸರಸ್ವತಿ ಮೆಸ್‌ ಮಾಲಕ ಜಯಂತ್‌ (56ವರ್ಷ) ಭಾರತ್‌ ಶೋರೂಂ ಬಳಿ ಅಜಿತ್‌ ನಗರ ರಸ್ತೆಗೆ ತಿರುಗಿಸುವ ವೇಳೆ ಅನುಗ್ರಹದಿಂದ ಉಜಿರೆ ಕಡೆಗೆ ಪ್ರಯಾಣ ಮಾಡುತ್ತಿದ್ದ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸ್ಕೂಟರ್‌ ಸವಾರನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.08 ರಂದು ಮೃತಪಟ್ಟಿದ್ದಾರೆ.

ಬೈಕ್‌ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.