Crime : ಗಾರೆ ಕೆಲಸದವನೊಂದಿಗೆ ವಿದ್ಯಾರ್ಥಿನಿ ಎಸ್ಕೇಪ್‌!

Share the Article

Belagavi: ನರ್ಸಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸಂತಿಬಸ್ತವಾಡ ಗ್ರಾಮದ ಸದ್ರುದ್ದೀನ್‌ ಭೇಪಾರಿ ಎಂಬ ಯುವಕ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ಇವರಿಬ್ಬರ ಮಧ್ಯೆ ಮೂರು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಇದಕ್ಕೆ ಮನೆ ಮಂದಿಯ ವಿರೋಧವಿತ್ತು. ಈ ವಿಷಯಕ್ಕೆ ತಾಯಿಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆಕ್ಷೇಪದ ಬಳಿಕ ಇವರಿಬ್ಬರೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಸದ್ರುದ್ದೀನ್‌ ಬೇಪಾರಿ ಗಾರೆ ಕೆಲಸ ಮಾಡುತ್ತಿದ್ದು, ತನ್ನ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಕುಟುಂಬದವರು ದೂರಿದ್ದು ಮಾತ್ರವಲ್ಲದೇ, ಯುವಕನ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.

Comments are closed.