Kodagu: ಸಮಾಜ ಸೇವಕಿ ಲೀಲಾ ಮೇದಪ್ಪಗೆ ರಾಜ್ಯ ಪ್ರಶಸ್ತಿ!

Share the Article

Kodagu: ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿಯು ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಮಾಡಿರುವವರಿಗೆ ನೀಡಲಾಗುವ ರಾಜ್ಯ ಪ್ರಶಸ್ತಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯೆ ಹಾಗೂ ಕೊಡಗು (Kodagu) ಜಿಲ್ಲಾ ಹಾಪ್ ಕಾಮ್ಸ್ ನ ನಿರ್ದೇಶಕಿ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ ಅವರು ಭಾಜನರಾಗಿದ್ದಾರೆ.

ಮಹಿಳಾ ದಿನಾಚರಣೆ ಪ್ರಯುಕ್ತ ಶಿಕಾರಿಪುರದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ಆಯೋಜಿಸಿರುವ ತೋಟಗಾರಿಕೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ

ಲೀಲಾ ಮೇದಪ್ಪ ಅವರು ಸನ್ಮಾನ ಹಾಗೂ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Comments are closed.