Viral Video : ಆಸ್ಪತ್ರೆ ಬಿಲ್ ನೋಡಿ ಶಾಕ್ – ಸಡನ್ ಆಗಿ ‘ಕೋಮಾ’ದಿಂದ ಎದ್ದು ಬಂದು ಆಸ್ಪತ್ರೆ ಎದುರು ಪ್ರತಿಭಟಿಸಿದ ವ್ಯಕ್ತಿ!!

Viral Video : ಆಸ್ಪತ್ರೆ ತನ್ನ ಚಿಕಿತ್ಸೆಗಾಗಿ ನೀಡಿದ ಬಿಲ್ಲು ಒಂದನ್ನು ನೋಡಿ ಕೋಮಾಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರು ಸಡನ್ ಆಗಿ ಎದ್ದು ಬಂದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
In a private hospital in Madhya Pradesh, a patient was tied up, and the family was extorted for money by falsely claiming that he had fallen into a coma. #Oscars#ChampionsTrophy2025#ViratKohli
— (@AmitYji127) March 5, 2025
ಹೌದು, ಭೋಪಾಲ್ ನಲ್ಲಿ ಖಾಸಗಿ ಆಸ್ಪತ್ರೆಯ ಬಿಲ್ ನೋಡಿ, ಕೋಮಾದಲ್ಲಿರುವ ವ್ಯಕ್ತಿಯೊಬ್ಬರು ಐಸಿಯುನಿಂದ ಆಮ್ಲಜನಕ ಮಾಸ್ಕ್ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರತಿಭಟನೆ ನಿರತರಾದ ವೇಳೆ ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವ್ಯಕ್ತಿ ‘ದೀನದಯಾಳ್ ನಗರದ ನಿವಾಸಿಯಾಗಿರುವ ನಾನು (ಬಂಟಿ) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೇಳೆ ನನ್ನ ತಪಾಸಣೆ ಮಾಡಿದ ವೈದ್ಯರು ಐಸಿಯುಗೆ ದಾಖಲು ಮಾಡಿದ್ದರು. ನಂತರ ಬೆನ್ನು ಮೂಳೆ ಮುರಿದು ಹೋದ ಪರಿಣಾಮ ನಾನು ಕೋಮಾಗೆ ಜಾರಿದ್ದು, ತಕ್ಷಣ ದುಬಾರಿ ಚಿಕಿತ್ಸೆಯ ಅಗತ್ಯವಿದೆ, ಆದಷ್ಟು ಬೇಗ ಹಣ ಹೊಂದಿಸಿ ಎಂದು ನನ್ನ ಕುಟುಂಬಕ್ಕೆ ವೈದ್ಯರು ತಿಳಿಸಿದ್ದರು. ನಮ್ಮ ಕುಟುಂಬದವರು ₹ 1ಲಕ್ಷ ಹೊಂದಿಸಿ ಆಸ್ಪತ್ರೆಗೆ ಕಟ್ಟಿದ್ದಾರೆ. ನಾನು ಕೋಮಾಗೆ ಹೋಗಿರಲಿಲ್ಲ. ಸಣ್ಣ ಪುಟ್ಟ ಗಾಯಗಳಾಗಿದ್ದವು. ಇದನ್ನು ನೆಪ ಮಾಡಿಕೊಂಡು ನಮ್ಮ ಬಳಿ ಹಣ ಸುಲಿಗೆ ಮಾಡಲು ಆಸ್ಪತ್ರೆಗಳು ಇಂತಹ ಕೆಟ್ಟ ಕೆಲಸ ಮಾಡುತ್ತಿವೆ. ಈ ವಿಷಯ ಗೊತ್ತಾಗಿಯೇ ನಾನು ಐಸಿಯುನಿಂದ ತಪ್ಪಿಸಿಕೊಂಡು ಬಂದೆ. ಮತ್ತು ಆಸ್ಪತ್ರೆಯ ಆವರಣದಲ್ಲಿ ಜನರನ್ನು ಒಟ್ಟುಗೂಡಿಸಿ ಆಸ್ಪತ್ರೆಗಳು ಹೇಗೆಲ್ಲಾ ಜನರಿಗೆ ಮೋಸ ಮಾಡುತ್ತವೆ ಎಂಬುದನ್ನು ತಿಳಿಸುವುದು ನನ್ನ ಉದ್ದೇಶವಾಗಿತ್ತು ಎಂದು ಬಂಟಿ ಹೇಳಿದ್ದಾರೆ.
Comments are closed.