Accident: ಪಡುಬಿದ್ರಿ: ಸೈಕಲ್ಗೆ ಬಿ.ಎಂ.ಡಬ್ಲ್ಯೂ ಕಾರು ಡಿಕ್ಕಿ: ಸೈಕಲ್ ಸವಾರ ಮೃತ್ಯು!

Accident: ಬಿ.ಎಂ.ಡಬ್ಲ್ಯೂ ಕಾರೊಂದು ಸೈಕಲ್ ಸವಾರನಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ಆತ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಾಪು ತಾಲೂಕಿನ ನಾಡ್ಸಾಲು ಗ್ರಾಮದ ಎಸ್ ಎಸ್ ಬಾರ್ ಬಳಿ ಸಂಭವಿಸಿದೆ.

ಮೃತ ದುರ್ದೈವಿಯನ್ನು ಸುಶೀಲ್ ನಿಯೋಗ್ ಎಂದು ಗುರುತಿಸಲಾಗಿದೆ. ಉಡುಪಿ ಮಂಗಳೂರು ರಾ.ಹೆ. 66 ಪಡುಬಿದ್ರಿ ನಡ್ನಾಲು ಗ್ರಾಮದ ಎಸ್.ಎಸ್. ಬಾರ್ ಬಳಿ ಸುದರ್ಶನ್ ಶೆಟ್ಟಿ ಎಂಬಾತ ತನ್ನ ಬಿ.ಎಂ.ಡಬ್ಲ್ಯೂ ಕಾರನ್ನು ಅತೀ ವೇಗವಾಗಿ ಓವರ್ ಟೇಕ್ ಮಾಡಿಕೊಂಡು ಹೋಗುತ್ತಿದ್ದಾಗ ಡಿವೈಡರ್ ಬಳಿ ರಸ್ತೆ ಕ್ರಾಸ್ ಮಾಡುತ್ತಿದ್ದ ಸೈಕಲ್ ಸವಾರ ಸುಶೀಲ್ ನಿಯೋಗ್ ನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.