Jaipur: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು- ಬಾಲಿವುಡ್‌ ಸ್ಟಾರ್‌ ನಟರಿಗೆ ನೋಟಿಸ್‌!

Share the Article

Jaipur: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು ನೀಡುತ್ತಿದ್ದ ನಟರಾದ ಶಾರುಖ್‌ ಖಾನ್‌, ಅಜಯ್‌ ದೇವಗನ್‌, ಟೈಗರ್‌ ಶ್ರಾಫ್‌ ಗೆ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಂಖ್ಯೆ-2 ಮೂವರು ನಟಿರಿಗೆ ನೋಟಿಸ್‌ ಜಾರಿ ಮಾಡಿದೆ.

ಮೂವರು ನಟರ ಜೊತೆಗೆ ಗುಟ್ಕಾ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಸ್‌ಗೆ ಕೂಡಾ ಸಮನ್ಸ್‌ ಕಳುಹಿಸಲಾಗಿದೆ. ಮಾರ್ಚ್‌ 19 ರಂದು ಆಯೋಗವು ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಜೈಪುರ ನಿವಾಸಿ ಯೋಗೇಂದ್ರ ಸಿಂಗ್‌ ಬಡಿಯಾಲ್‌ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರನ್ನು ನೀಡಿದ್ದು, ನೋಟಿಸ್‌ ನೀಡಲಾಗಿದೆ. ಗುಟ್ಕಾ ಉತ್ಪನ್ನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುವ ಹೇಳಿಕೆ ನೀಡುವ ಜಾಹೀರಾತು ಪ್ರಕಟ ಮಾಡಲಾಗಿದೆ ಎಂದು ದೂರಲಾಗಿದೆ.

ಆಯೋಗದಲ್ಲಿ ಈ ಆರೋಪ ಸಾಬೀತಾದರೆ, ಈ ಜಾಹೀರಾತನ್ನು ನಿಷೇಧ ಮಾಡಬಹುದು. ಸೆಲೆಬ್ರಿಟಿಗಳ ಮೇಲೆ ಆರ್ಥಿಕ ದಂಡವನ್ನು ವಿಧಿಸಬಹುದು. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯವಿದೆ.

Comments are closed.