Crime: ಹುಡುಗಿಯನ್ನು ಚುಡಾಯಿಸಿದ ಪುಂಡರು – ಪ್ರಶ್ನಿಸಿದ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ

Share the Article

Crime: ಶಾಲೆಗೆ ಹೋಗುವ ತನ್ನ 14 ವರ್ಷದ ಮಗಳನ್ನು ಪುಂಡರು ಚುಡಾಯಿಸಿದಕ್ಕೆ ಆಕೆಯ ತಾಯಿ ಅವರನ್ನು ಪ್ರಶ್ನಿಸಿ ಪ್ರತಿಭಟಿಸಿದ್ದಾಳೆ. ಇದಕ್ಕೆ ಸಿಟ್ಟಾದ ಆ ಕಿಡಿಗೇಡಿಗಳು ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹೌದು, ಔರಂಗಾಬಾದ್‌ನ ಜೋಗೇಶ್ವರಿಯಲ್ಲಿ 14 ವರ್ಷದ ಬಾಲಕಿಯನ್ನು ಮೂವರು ಕಿಡಿಗೇಡಿಗಳು ಶಾಲೆಯಿಂದ ಮನೆಗೆ ಹೋಗುವಾಗ ಚುಡಾಯಿಸಿದಾಗ, ಆಕೆಯ ತಾಯಿ ಪ್ರತಿಭಟಿಸಿದಳು. ಇದರಿಂದ ಕೋಪಗೊಂಡ ಕಿಡಿಗೇಡಿಗಳು, ಆಕೆಯ ತಾಯಿ, ತಂದೆ ಮತ್ತು ನೆರೆಹೊರೆಯವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ನಿಲೇಶ್ ದುಬಿಲೆ, ರಿಷಿಕೇಶ್ ದುಬಿಲೆ ಮತ್ತು ಪ್ರತೀಕ್ ರಜಪೂತ್ ಎಂಬ ಮೂವರು ಆರೋಪಿಗಳು, ಬಾಲಕಿಯನ್ನು ನಿರಂತರವಾಗಿ ಚುಡಾಯಿಸುತ್ತಿದ್ದರು. ಬಾಲಕಿಯ ತಾಯಿ ಪ್ರತಿಭಟಿಸಿದಾಗ, ಅವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತಂದೆ ಮತ್ತು ನೆರೆಹೊರೆಯವರು ಮಧ್ಯಪ್ರವೇಶಿಸಿದಾಗ, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.