Shabana Azmi: ನಟಿ ಶಬಾನಾ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ!

Share the Article

Bengaluru Film Festival: ಇಂದು (ಮಾರ್ಚ್‌ 8) 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯವಾಗಲಿದೆ. ಇಂದು ಪ್ರಶಸ್ತಿ ವಿಜೇತ ಸಿನಿಮಾಗಳ ಪಟ್ಟಿ ಪ್ರಕಟಣೆ ಆಗಲಿದೆ. ಅಪ್ರತಿಮೆ ಸಾಧನೆ ಮಾಡಿದ ಹಿರಿಯ ನಟ-ನಟಿಯರನ್ನು ಗುರುತಿಸಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಖ್ಯಾತ ನಟಿ ಶಬಾನಾ ಅಜ್ಮಿ ಅವರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡದ ಕಲ್ಟ್‌ ಸಿನಿಮಾಗಳಲ್ಲಿ ಒಂದಾಗಿರುವ, ಎಂಎಸ್‌ ಸತ್ಯು ನಿರ್ದೇಶನದ ʼಕನ್ನೇಶ್ವರ ರಾಮʼ ಸಿನಿಮಾದಲ್ಲಿ ಶಬಾನಾ ಆಜ್ಮಿ ನಾಯಕಿಯಾಗಿ ನಟಿಸಿದ್ದಾರೆ. ಇದರಲ್ಲಿ ಅನಂತ್‌ನಾಗ್‌ ನಾಯಕರಾಗಿಯೂ, ಅಮೋಲ್‌ ಪಾಲೇಕರ್‌ ಕೂಡಾ ನಟನೆ ಮಾಡಿದ್ದರು. ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ 16ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.

Comments are closed.