High Court: ಸೌಜನ್ಯ ಪ್ರಕರಣದ ಮರು ತನಿಖೆ ಸಾಧ್ಯವೇ ಇಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ?

High Court : ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೊನಿಂದಾಗಿ ಇದೀಗ ಬೃಹತ್ ಮಟ್ಟದಲ್ಲಿ ವೈರಲ್ ಆಗಿದೆ. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ.

ಹೌದು, ಸಮೀರ್ ಎಂಡಿ ಅವರು ಸೌಜನ್ಯ ಪ್ರಕರಣದ ಕುರಿತು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ವಿವರಣೆ ನೀಡಿ ವಿಡಿಯೋವನ್ನು ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದು ಕೋಟಿಗಟ್ಟಲೆ ವ್ಯೂ ಕಾಣುವುದರೊಂದಿಗೆ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಈ ಪ್ರಕರಣದ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಇದೀಗ ಮತ್ತೆ ಮುನ್ನಡೆಗೆ ಬಂದು ಚರ್ಚೆಯಾಗುತ್ತಿದೆ. ಅದೇನೆಂದರೆ ಸೌಜನ್ಯ ಪ್ರಕರಣದ ಮರುತನಿಕೆ ಸಾಧ್ಯವೇ ಇಲ್ಲ ಎಂದು ಕೋರ್ಟ್ ಹೇಳಿತ್ತು. ಇದು ಏಕೆ ಸಾಧ್ಯವಿಲ್ಲ ಎಂಬುದು ಹಲವರ ಪ್ರಶ್ನೆ.
ಯಸ್, ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಈಗಾಗಲೇ ಅತ್ಯಂತ ಸ್ಪಷ್ಟವಾಗಿ ತೀರ್ಪು ಬರೆದುಬಿಟ್ಟಿದೆ. ಯಾವುದೇ ಕಾರಣಕ್ಕೂ ಸೌಜನ್ಯ ಕೇಸ್‌ನ ಮರು ತನಿಖೆ ಸಾಧ್ಯವಿಲ್ಲ ಎಂದು ಕಳೆದ ವರ್ಷ ಸೆ.13 ರಂದು ನೀಡಿದ ತೀರ್ಪಿನಲ್ಲಿಯೇ ತಿಳಿಸಿದೆ. ಅಷ್ಟಕ್ಕೂ ಹೈಕೋರ್ಟ್‌ಗಾಗಿ ದೇಶದ ಯಾವುದೇ ಕೋರ್ಟ್‌ಗಾಗಿ ಈ ಪ್ರಕರಣ ಮುಚ್ಚಿಹಾಕಬೇಕು ಅನ್ನೋ ಉದ್ದೇಶವಿಲ್ಲ. ಅಲ್ಲೊಂದು ರೇಪ್ & ಮರ್ಡರ್ ಕೇಸ್ ನಡೆದಿತ್ತು ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ವಿಚಾರದಲ್ಲಿ ಮೂಲವಾಗಿ ದೂಷಣೆ ಮಾಡಬೇಕಾಗಿರೋದು ಅಂದಿನ ತನಿಖಾ ತಂಡದ ಬಗ್ಗೆ.
ತನಿಖಾ ತಂಡದ ವೈಫಲ್ಯದಿಂದ ಅತೀ ಮುಖ್ಯವಾದ ಕೇಸ್‌ವೊಂದು ಹಳ್ಳ ಹಿಡಿದಿರುವುದು ಇದು ಮೊದಲೇನಲ್ಲ. ಸೌಜನ್ಯ ಕೇಸ್ ನಡೆಯೋಕು ನಾಲ್ಕು ವರ್ಷಗಳ ಮುನ್ನ ಇಡೀ ದೇಶದ ತಲ್ಲಣಕ್ಕೆ ಕಾರಣವಾಗಿದ್ದ ಆರುಷಿ ಡಬಲ್ ಮರ್ಡರ್ ಕೇಸ್‌ನಲ್ಲಿ ಆಗಿರೋದು ಕೂಡ ಇದೆ. ಯಾವುದೇ ಕೇಸ್‌ನಲ್ಲಿಯೇ ಆಗಲಿ, ಅದರ ಇತ್ಯರ್ಥ ಏನು ಬೇಕಾದರೂ ಆಗಲಿ, ಆದರೆ ಕ್ರೈಮ್ ಸ್ಪಾಟ್‌ನಲ್ಲಿ ಆಗಿರೋದು ಏನು ಅನ್ನೋದನ್ನ ಒಂಚೂರು ಹಿಂಜರಿಕೆ ಇಲ್ಲದೆ ಮಾಡಬೇಕಾಗಿರುವುದು ತನಿಖಾ ತಂಡ. ಇದಕ್ಕಾಗಿ ಅವರಿಗೆ ಸಮಯ ಇರೋದು ಕೇವಲ 24 ಗಂಟೆ. ಯಾವುದೇ ಕ್ರೈಮ್‌ನಲ್ಲಿ ಆಗುವ ಎಲ್ಲಾ ಘಟನೆಗಳಲ್ಲಿ ಮೊದಲ 24 ಗಂಟೆಯಲ್ಲಿ ಏನು ಆಗಿರುತ್ತದೆ ಅನ್ನೋದೇ ಮುಖ್ಯ ಅಂಶ.
ಆ ನಂತರದಲ್ಲಿ ಕೇಸ್ ಹೀಗಾಗಿತ್ತು, ಹಾಗಾಗಿತ್ತು ಅನ್ನೋದು ಊಹಾಪೋಹವಾಗುತ್ತದೆ ಹೊರತು, ಕೋರ್ಟ್‌ನಲ್ಲಿ ಶಿಕ್ಷೆ ನೀಡೋದಕ್ಕೆ ಸಾಧ್ಯವಾಗೋದಿಲ್ಲ. ಸೌಜನ್ಯ ಕೇಸ್‌ನಲ್ಲೂ ಮರು ತನಿಖೆಯಾಗಿ ಈಗ ಇನ್ನೊಬ್ಬ ವ್ಯಕ್ತಿ ತಪ್ಪಿತಸ್ಥ ಎಂದರೂ ಆತ ಹಣವಂತನಾಗಿದ್ದಲ್ಲಿ ಸುಲಭವಾಗಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳಿವೆ. ಸೌಜನ್ಯ ಪ್ರಕರಣದ ಬಗ್ಗೆ ಹೆಚ್ಚುತ್ತಿರುವ ಆಕ್ರೋಶದ ನಡುವರ, ಸೆಪ್ಟೆಂಬರ್ 2024 ರಲ್ಲಿ ಮರುತನಿಖೆಯ ವಿಷಯದ ಕುರಿತು ಕರ್ನಾಟಕ ಹೈಕೋರ್ಟ್ ‘ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೊದಲ 24 ಗಂಟೆಗಳು ಬಹಳ ನಿರ್ಣಾಯಕ. ಆದರೆ, ಈ ಪ್ರಕರಣದಲ್ಲಿ ಎಲ್ಲವೂ ರಾಜಿಯಾದಂತೆ ಕಂಡಿದೆ. ತನಿಖೆ ಹಳ್ಳಿ ತಪ್ಪಿರುವುದು ಗೊತ್ತಾಗಿದೆ’ ಎಂದಿತ್ತು.
Comments are closed.