Suicide: ಮೊಬೈಲ್ ಕಸಿದುಕೊಂಡಿದ್ದಕ್ಕೆ ತಾಯಿ ಮೇಲೆ ಸಿಟ್ಟಿನಿಂದ ವಿದ್ಯಾರ್ಥಿ ಆತ್ಮಹತ್ಯೆ!

Share the Article

Suicide: ತಾಯಿ ಮೊಬೈಲ್ ಕಸಿದುಕೊಂಡ ವಿಚಾರಕ್ಕೆ ವಿದ್ಯಾರ್ಥಿನಿಯೋರ್ವಳು ತಾಯಿಯ ಮೇಲೆ ಕೋಪಗೊಂಡು ನೇಣು ಬಿಗಿದು ಆತ್ಮಹತ್ಯೆ (Suicide)ಮಾಡಿಕೊಂಡ ಘಟನೆ ಸಾಸ್ತಾನದ ಕುಂಬಾರಬೆಟ್ಟುವಿನಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಸಾಸ್ತಾನದ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಎಂಬವವರ ಪುತ್ರಿ ದಿಶಾ (16) ಮೊಬೈಲ್‌ ಹಿಡಿದುಕೊಂಡು ಕುಳಿತಿದ್ದ ಹಿನ್ನಲೆ ದಿಶಾಳ ತಾಯಿ ಗದರಿಸಿ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ದಿಶಾ ನೇರವಾಗಿ ಕೋಣೆಯ ಬಾಗಿಲು ಹಾಕಿಕೊಂಡಿದ್ದು, ತಾಯಿಮನೆಯ ಕಿಟಕಿಯ ಕಂಬಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಯತ್ನಿಸಿದ್ದು, ತಕ್ಷಣ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಿಸಿ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

Comments are closed.