VHP: ಸೌಜನ್ಯ ಪ್ರಕರಣದ ವಿಡಿಯೋ – ಯೂಟ್ಯೂಬರ್ ಸಮೀರ್ ಗೆ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ!!

VHP: ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೊನಿಂದಾಗಿ ಇದೀಗ ಬೃಹತ್ ಮಟ್ಟದಲ್ಲಿ ವೈರಲ್ ಆಗಿದೆ. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮುಖಂಡರು ಸಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ‘ಸಮೀರ್ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ವಿಡಿಯೊ ಮಾಡಿ ಅಧಿಕ ಪ್ರಸಂಗಿತನ ತೋರಿಸಿದ್ದಾನೆ. ಆತ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ, ಮುಂದೆ ಏನು ಮಾಡಬೇಕು ಎನ್ನುವುದು ತಿಳಿದಿದೆ. ‘ಯೂಟ್ಯೂಬರ್ ಸಮೀರ್ ಹಿಂದೂ – ಮುಸಲಾನ್ಮರ ನಡುವೆ ಸಂಘರ್ಷಕ್ಕೆ ಕಾರಣವಾಗುವುದು ಬೇಡ. ಅಪ್ಪಿತಪ್ಪಿಯೂ ಸಮೀರ್ ಪುತ್ತೂರಿಗೆ ಬರಬೇಡ, ಬಂದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಎಚ್ಚರಿಸಿದರು.
ಅಲ್ಲದೆ ಸೌಜನ್ಯಾ ಕುಟುಂಬಕ್ಕೆ ನ್ಯಾಯಕ್ಕಾಗಿ ವಿಶ್ವ ಹಿಂದೂ ಪರಿಷತ್ ಮೊದಲಿನಿಂದಲೂ ಹೋರಾಟ ಮಾಡಿದೆ. ಈಗಲೂ ನ್ಯಾಯಕ್ಕಾಗಿ ಒತ್ತಾಯಿಸುತ್ತದೆ’ ಎಂದರು.
Comments are closed.